

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆಯಿಂದ ಸಿದ್ಧಾರೂಢಮಠಕ್ಕೆ ಸಂರ್ಪಸುವ ಆರ್.ಎನ್. ಶೆಟ್ಟಿ ರಸ್ತೆಯ ಮೊದಲ ಹಂತದ ಕಾಂಕ್ರೀಟಿಕರಣ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಶುಕ್ರವಾರದಂದು ಭೂಮಿಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟೆಂಗಿನಕಾಯಿ, ಕಳೆದ 67 ವರ್ಷಗಳಿಂದ ನನೆಗುದಿಗೆ ಬಿದ್ದದ್ದ ಆರ್.ಎನ್. ಶೆಟ್ಟಿ ರಸ್ತೆ ನಿರ್ವಣಕ್ಕೆ ಕಳೆದ ಒಂದು ವರ್ಷದಿಂದ ಸತತ ಪ್ರಯತ್ನ ನಡೆಸಲಾಗಿತ್ತು. ಅಡೆತಡೆಗಳನ್ನು ನಿವಾರಿಸುವ ಜತೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ರ್ಚಚಿಸಿ, ರೂಪುರೇಷೆಗಳನ್ನು ತಯಾರು ಮಾಡಲಾಯಿತು ಎಂದರು.
ಈ ವ್ಯಾಪ್ತಿಗೆ ಬರುವ ಮೂರು ವಾರ್ಡ್ಗಳ ಹಾಗೂ ಶ್ರೀ ಸಿದ್ಧಾರೂಢ ಮಠಕ್ಕೆ ಸಂರ್ಪಸುವ ಬಹುನಿರೀಕ್ಷಿತ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಉತ್ತಮ ಗುಣಮಟ್ಟ್ಟ ಕಾಂಕ್ರೀಟ್ ರಸ್ತೆಯನ್ನು ಶೀಘ್ರ ನಿರ್ವಿುಸುವಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಪ್ರಮುಖರಾದ ಕೃಷ್ಣಾ ಗಂಡಗಾಳೇಕರ, ಮುಕುಂದಗೌಡ ಗುಗ್ಗರಿ, ಹರೀಶ ಜಂಗ್ಲಿ, ಗುರು ವೀರಾಪುರ, ಸಂಗೀತಾ ಬದ್ದಿ , ಶಿವನಗೌಡ್ರ, ಕಿಶನ ಬಿಲಾನಾ, ದೀಪಕ ಜಿತೂರಿ, ಗೀತಾ ಮುದ್ದಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಗುತ್ತಿಗೆದಾರರು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.