ಪಾನಕ-ಮಜ್ಜಿಗೆ ವಿತರಣೆ ಕಾರ್ಯಕ್ಕೆ ಚಾಲನೆ

02 SBG-1 Panaka Vitarane (2)
ಶ್ರವಣಬೆಳಗೊಳದ ಶ್ರೀ ವಿಂಧ್ಯಗಿರಿ ಬೆಟ್ಟದ ಸ್ವಾಗತ ಕಚೇರಿ ಮುಂಭಾಗದಲ್ಲಿ ಯಾತ್ರಾರ್ಥಿಗಳಿಗೆ ಪಾನಕ-ಮಜ್ಜಿಗೆ ವಿತರಣಾ ಕಾರ್ಯಕ್ಕೆ ಶನಿವಾರ ರಾಷ್ಟ್ರೀಯ ಅಲ್ಪ ಸಂಖ್ಯಾತ ಇಲಾಖೆಯ ಮಾಜಿ ಸಲಹೆಗಾರ ಅಂಕುರ್ ಜೈನ್ ಚಾಲನೆ ನೀಡಿದರು. ಡಾ. ಬಿ.ಆರ್.ಯುವರಾಜ್, ಎಚ್.ಪಿ.ಅಶೋಕ್‌ಕುಮಾರ್, ಯಶೋದಾ ಲೋಕೇಶ್, ಎನ್.ಆರ್.ವಾಸು, ಯಶಸ್ ಜೈನ್, ಭಾರತಿ ಚಂದ್ರು, ಎಸ್.ಪಿ.ಮಹೇಶ್ ಇದ್ದರು.
Published on

ಶ್ರವಣಬೆಳಗೊಳ: ಶ್ರೀ ವಿಂಧ್ಯಗಿರಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ದರ್ಶನಕ್ಕಾಗಿ ಆಗಮಿಸುವ ಯಾತ್ರಾರ್ಥಿಗಳಿಗೆ ಇಂದಿನಿಂದ ಪಾನಕ-ಮಜ್ಜಿಗೆ ವಿತರಿಸುವ ಕಾರ್ಯಕ್ಕೆ ಬೆಟ್ಟದ ಸ್ವಾಗತ ಕಚೇರಿ ಮುಂಭಾಗದಲ್ಲಿ ಶನಿವಾರ ರಾಷ್ಟ್ರೀಯ ಅಲ್ಪಸಂಖ್ಯಾತ ಇಲಾಖೆಯ ಮಾಜಿ ಸಲಹೆಗಾರ ಅಂಕುರ್ ಜೈನ್ ಚಾಲನೆ ನೀಡಿದರು.


ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಬಿ.ಆರ್.ಯುವರಾಜ್ ಮಾತನಾಡಿ, ಈ ವರ್ಷ ಫೆಬ್ರವರಿ ತಿಂಗಳಿಂದಲೇ ಬೇಸಿಗೆಯ ತಾಪಮಾನ ಹೆಚ್ಚಾಗಿರುವುದರಿಂದ ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳಿಗೆ ಆಯಾಸ, ನಿಶ್ಯಕ್ತಿ ಉಂಟಾಗುತ್ತಿದೆ. ಇದರಿಂದ ಬೆಟ್ಟ ಹತ್ತಿ ಇಳಿಯಲು ದೈಹಿಕವಾಗಿ ಬಳಲುತ್ತಿದ್ದು, ಇದನ್ನು ಮನಗಂಡ ಶ್ರೀ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಅಭಿನವ ಭಟ್ಟಾರಕ ಸ್ವಾಮೀಜಿ ಅವರು ಪಾನಕ-ಮಜ್ಜಿಗೆ ವಿತರಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.


ಎಸ್‌ಡಿಜೆಎಂಐಎಂಸಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಎಚ್.ಪಿ.ಅಶೋಕ್‌ಕುಮಾರ್ ಮಾತನಾಡಿ, ಪೂಜ್ಯಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀ ಮಠದ ವತಿಯಿಂದ ಮುಂದಿನ ದಿನಗಳಲ್ಲಿ ಯಾತ್ರಾರ್ಥಿಗಳಿಗೆ ಪ್ರಸಾದ ವಿತರಣೆ ಹಾಗೂ ವಿಶೇಷ ದಿನಗಳಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.


ಶ್ರವಣಬೆಳಗೊಳ ಗ್ರಾಪಂ ಅಧ್ಯಕ್ಷೆ ಯಶೋದಾ ಲೋಕೇಶ್, ಸದಸ್ಯರಾದ ಎನ್.ಆರ್.ವಾಸು, ಯಶಸ್ ಜೈನ್, ಭಾರತಿ ಚಂದ್ರು, ಎಸ್‌ಡಿಜೆಎಂಐಎಂಸಿ ಟ್ರಸ್ಟ್ ಮುಖ್ಯಕಾರ್ಯದರ್ಶಿ ಎಸ್.ಪಿ.ಮಹೇಶ್, ಮುಖಂಡರಾದ ಭಾನುಕುಮಾರ್, ಬಾಹುಬಲಿ, ಪೌದನ್, ಕೂಷ್ಮಾಂಡಿನಿ ಮಹಿಳಾ ಸಮಾಜದ ಅಧ್ಯಕ್ಷೆ ಮಹಾಲಕ್ಷ್ಮೀ ಪ್ರಮೋದ್, ಉಪಾಧ್ಯಕ್ಷೆ ತಿಲಕ್ ಜೈನ್, ಪುಷ್ಪಾ, ಶಿಲ್ಪಾ, ಶ್ರೀಮಠದ ಕಾರ್ಯಕರ್ತರಾದ ಗುನಪಾಲ್, ಜ್ವಾಲನಯ್ಯ, ಜಿನದತ್ತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net