ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ramadas
Published on

ಮೈಸೂರು: ಶಾಸಕ ಎಸ್.ಎ.ರಾಮದಾಸ್ ಮಂಗಳವಾರ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಮುಖ್ಯವಾಗಿ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 43, 48, 47, 57, 59 ಮತ್ತು 60ಕ್ಕೆ ಸಂಬಂಧಿಸಿದ ರಸ್ತೆ ಕಾಮಗಾರಿಗಳಿಗೆ ಶಾಸಕರ ಅನುದಾನದಡಿಯಲ್ಲಿ ಚಾಲನೆ ನೀಡಿದರು.

ಟಿ.ಕೆ.ಬಡಾವಣೆಯ ಗಣೇಶ್ ಭಂಡಾರ್ ವೃತ್ತದಿಂದ ತರಳಬಾಳು ವೃತ್ತ ಹಾಗೂ ಗಣೇಶ್ ಭಂಡಾರ್‌ನಿಂದ ಬೋಗಾದಿ ರಸ್ತೆವರೆಗಿನ ರಸ್ತೆ ಡಾಂಬರೀಕರಣದ ಕಾಮಗಾರಿಗೆ ಚಾಲನೆ ನೀಡಿದರು. ಜಯನಗರದ 1ನೇ ಮುಖ್ಯ ರಸ್ತೆಯಿಂದ ಕನ್ನೇಗೌಡ ಸ್ಮಶಾನದ ಮಾರ್ಗವಾಗಿ ಸಿದ್ಧಗಂಗಾ ಸ್ವಾಮೀಜಿ ವೃತ್ತದ ಪಡುವಣ ರಸ್ತೆವರೆಗಿನ ರಸ್ತೆ-ಡಾಂಬರೀಕರಣಕ್ಕೆ ಚಾಲನೆ ನೀಡಿದರು. ಮಳಲವಾಡಿ ರಸ್ತೆಯಿಂದ ಐಶ್ವರ್ಯ ಬಡಾವಣೆ ಮಾರ್ಗವಾಗಿ ಆದಿಚುಂಚನಗಿರಿ ಸಂಪರ್ಕ ಹೊಂದುವ ರಸ್ತೆವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.
ಜಯನಗರ 2ನೇ ಮುಖ್ಯ ರಸ್ತೆಯಿಂದ ನ್ಯಾಯಾಲಯದ ಮಾರ್ಗವಾಗಿ ಆದಿಚುಂಚನಗಿರಿ ಮುಖ್ಯರಸ್ತೆಯ ರಸ್ತೆ-ಡಾಂಬರೀಕರಣ ಹಾಗೂ ಜಯನಗರದ ಕನ್ನೇಗೌಡ ವೃತ್ತದಿಂದ ಶಿವರಾಮ್ ಬಡಾವಣೆವರೆಗೂ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದರು.
ಈ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರಿಗೆ ಓಡಾಡಲು ತುಂಬ ತೊಂದರೆಯುಂಟಾಗಿತ್ತು ಹಾಗೂ ಈ ರಸ್ತೆಗಳು ಅತಿ ಹೆಚ್ಚು ವಾಹನಗಳು ಓಡಾಡುವ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿಯು ಪೂರ್ಣವಾಗಿದ್ದು, ಮಳೆ ನೀರು ಬಂದಂತಹ ಸಂದರ್ಭದಲ್ಲಿ ಈ ರಸ್ತೆಯಲ್ಲಿ ನೀರು ಅತಿ ಹೆಚ್ಚಾಗಿ ಹರಿದು ರಸ್ತೆ ಹಾಳಾಗಿದ್ದನ್ನು ಮನಗಂಡು ಈ ರಸ್ತೆಯ ಎರಡು ಬದಿಯಲ್ಲಿ ಮಳೆಚರಂಡಿಯನ್ನು ಮಾಡಿ ನಂತರ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಐಶ್ವರ್ಯ ಬಡಾವಣೆಯಲ್ಲಿ ದೀಪದ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆ ಓಡಾಡಲು ಕಷ್ಟವಾಗುತ್ತದೆ ಎಂದು ಸಾರ್ವಜನಿಕರ ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರು, ವಿದ್ಯುತ್ ದೀಪಗಳನ್ನು ಇಂದೇ ಅಳವಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಸದಸ್ಯರಾದ ಗೋಪಿ, ಎಂ.ಎಸ್.ಶೋಭಾ, ಭುವನೇಶ್ವರಿ ಪ್ರಭುಮೂರ್ತಿ, ಪಿ.ಟಿ.ಕೃಷ್ಣ, ಮಾಜಿ ಸದಸ್ಯ ಜೆ.ಎಸ್.ಜಗದೀಶ್, ಮುಖಂಡರಾದ ಬಸವರಾಜು, ರಮೇಶ್, ಶಿವಣ್ಣ, ಮಧು, ಶಾಂತವೀರಪ್ಪ, ಗಿರೀಶ್, ಸೋಮಣ್ಣ, ಅಣ್ಣಪ್ಪ, ಉಮೇಶ್, ಪ್ರದೀಪ್, ಸತ್ಯಾನಂದ ವಿಟ್ಟು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net