ಮೈಸೂರು ಜೆಪಿ ನಗರ ಭಾಗದ ರಸ್ತೆಗಳ ಅಭಿವೃದ್ಧಿಗೆ ಚಾಲನೆ

Ramdas
Published on

ಮೈಸೂರು: ಜೆಪಿ ನಗರ ಭಾಗದಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಎ. ರಾಮದಾಸ್ ಬುಧವಾರ ಭೂಮಿಪೂಜೆ ನೆರವೇರಿಸಿದರು.

ಜೆಪಿ ನಗರದ ಎಕ್ಸೆಲ್ ಪ್ಲಾಂಟ್ ಮುಖ್ಯ ರಸ್ತೆ, 26ನೇ ಮುಖ್ಯರಸ್ತೆ, 30ನೇ ಮುಖ್ಯ ರಸ್ತೆ ಮತ್ತು ಓಂಕಾರ್ ಬಡಾವಣೆಯ ಸುತ್ತಮುತ್ತ, 29ನೇ ಮುಖ್ಯ ರಸ್ತೆ ಮತ್ತು ಅಡ್ಡರಸ್ತೆಗಳು, ಸಿ ಜೋನ್ ಭಾಗದ ರಸ್ತೆಗಳು, 20ನೇ ಮುಖ್ಯರಸ್ತೆ ಮತ್ತು 4 ರಿಂದ 6ನೇ ಅಡ್ಡರಸ್ತೆಗಳು, ಜೆಪಿ ನಗರದ ಹಳೇ ಹೊಸೂರು ಭಾಗದ ಮುಖ್ಯರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್, ಕೆ.ಆರ್. ಕ್ಷೇತ್ರದಲ್ಲಿರುವಂತ 472 ಕಿ.ಮೀ. ರಸ್ತೆಗಳ ಪೈಕಿ ಈಗಾಗಲೇ 200 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಉಳಿದಂತ ರಸ್ತೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಕ್ಷೇತ್ರದ ಎಲ್ಲ ರಸ್ತೆಗಳು ಅಭಿವೃದ್ಧಿ ಕಾಣಲಿದೆ ಎಂದರು.

ಈ ಸಂದರ್ಭ ನಗರಪಾಲಿಕೆ ಸದಸ್ಯರಾದ ಶಾಂತಮ್ಮ ವಡಿವೇಲು, ಶೋಭಾ ಸುನೀಲ್, ಶಾರದಮ್ಮ ಈಶ್ವರ್, ಸ್ಥಳೀಯ ಮುಖಂಡರಾದ ವಡಿವೇಲು, ಈಶ್ವರ್, ದೇವರಾಜೇಗೌಡ, ಕೇಬಲ್ ನಾಗೇಂದ್ರ, ಓಂಶ್ರೀನಿವಾಸ, ಮುರುಳಿಧರ್, ಶಿವಪ್ರಸಾದ್, ಮಹದೇವ್, ರಾಘವೇಂದ್ರ, ಅಕ್ಷಯ್, ಯೋಗೇಂದ್ರ, ನಾಗರತ್ನ, ರೇಣುಕಾ, ಶ್ರೀವಾಣಿ, ಯೋಗೇಶ್ವರಿ, ನರೇಶ್, ರಮೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net