

ಮೈಸೂರು: ನಿರಂತರ ಫೌಂಡೇಷನ್ ವತಿಯಿಂದ ನಗರದ ಕಲಾಮಂದಿರದ ಆವರಣದ ಕಿರು ರಂಗಮಂದಿರದಲ್ಲಿ ಆಯೋಜಿಸಿರುವ ನಿರಂತರ ರಂಗ ಉತ್ಸವಕ್ಕೆ ಗುರುವಾರ ಚಾಲನೆ ದೊರೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಉತ್ಸವಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು. ನಿರಂತರ ಅಧ್ಯಕ್ಷ ಎಂ.ಎಂ.ಸುಗುಣ, ಸಂಸ್ಥಾಪಕ ಕಾರ್ಯದರ್ಶಿ ಪ್ರಸಾದ್ ಕುಂದೂರು, ನಟಿ ಯಶು ಇದ್ದರು. ಬಳಿಕ ಬೆಂಗಳೂರಿನ ರಂಗರಥ ತಂಡದಿಂದ ‘ಕ್ರೌಂಚಗೀತಾ’ ನಾಟಕ ಪ್ರದರ್ಶನ ನಡೆಯಿತು. ಇದಕ್ಕೂ ಮುನ್ನ ಯಲ್ಲಾಪುರದ ಅಂಚೆ ಮದ್ಲೇ ಕಲಾತಂಡ ಪ್ರಸ್ತುತ ಪಡಿಸಿದ ‘ಸಿದ್ದಿ ಡಮಾಮಿ’ ಜನಪದ ನೃತ್ಯ ಗಮನ ಸೆಳೆಯಿತು. ರಂಗ ಉತ್ಸವವು ಡಿ.25 ರವರಗೆ ನಡೆಯಲಿದ್ದು, 22ರಂದು ಸಂಜೆ 7 ಗಂಟೆಗೆ ಅಭಿನಯ ತರಂಗ ತಂಡದಿಂದ ‘ಆತಂಕವಾದಿಯ ಆಕಸ್ಮಿಕ ಸಾವು’, 23ರಂದು ಸಂಜೆ 7 ಗಂಟೆಗೆ ನಿರ್ದಿಗಂತ ತಂಡದಿಂದ ‘ಪ್ರಾಜೆಕ್ಟ್ ಡಾರ್ಲಿಂಗ್’, 24ರಂದು ಸಂಜೆ 7 ಗಂಟೆಗೆ ನಿರಂತರ ತಂಡದಿಂದ ‘ಗೊರೂರು’, 25ರಂದು 7 ಗಂಟೆಗೆ ಆಟಮಾಟ ತಂಡದಿಂದ ‘ನಾ ರಾಜಗುರು’ ನಾಟಕ ಪ್ರದರ್ಶನ ನಡೆಯಲಿದೆ.