ಮಂಗಳ ಶಾಲೆ ಆವರಣದಲ್ಲಿ 10 ಸಾವಿರ ಬೀಜದುಂಡೆ ತಯಾರಿಗೆ ಚಾಲನೆ

24Rural1
Published on

ದೊಡ್ಡಬಳ್ಳಾಪುರ ಗ್ರಾಮಾಂತರ: ನಗರದ ಕೊಂಗಾಡಿಯಪ್ಪ ರಸ್ತೆಯ ಮಂಗಳ ಶಾಲೆ ಆವರಣದಲ್ಲಿ ಪರಿಸರ ತಂಡದಿಂದ ಬೀಜದುಂಡೆ ತಯಾರಿಸಲು ಭಾನುವಾರ ವೃತ್ತ ನಿರೀಕ್ಷಕ ರಾಘವ್ ಎಸ್.ಗೌಡ ಚಾಲನೆ ನೀಡಿ ಮಾತನಾಡಿದರು.

ಈಗಾಗಲೇ ಮಳೆ ಆರಂಭವಾಗಿದ್ದು, ಬೀಜದುಂಡೆ ಬಿತ್ತನೆ ಮಾಡುವುದರಿಂದ ಪರಿಸರ ಬೆಳಸಬಹುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಹುಣಸೆ, ಹಲಸು, ಮಾವು, ಹೊಂಗೆ, ಬೇವು ಇತರ 12 ಬಗೆಯ ಬೀಜಗಳನ್ನು ಉಂಡೆ ಮಾಡಲು 50 ಜನರು ಪ್ರತಿದಿನ ಕನಿಷ್ಠ ಸಾವಿರ ಬೀಜದುಂಡೆ ಮಾಡಲು ಶ್ರಮಿಸುತ್ತಿದ್ದಾರೆ. ಅಂದಾಜು 30 ಸಾವಿರ ಬೀಜದುಂಡೆ ಮಾಡಿ ಮಳೆ ಬಿದ್ದ ನಂತರ ಮಾಕಳಿ ಹಾಗೂ ಘಾಟಿ ಅರಣ್ಯ ಪ್ರದೇಶದಲ್ಲಿ ಚೆಲ್ಲುವ ಯೋಜನೆ ಮಾಡಲಾಗಿದೆ ಎಂದು ತಂಡದ ಸದಸ್ಯರು ತಿಳಿಸಿದರು.

ಪರಿಸರ ತಂಡದ ಜನಪರ ಚಂದ್ರು, ನಗರಸಭೆ ಮಾಜಿ ಸದಸ್ಯ ಚೌಡರಾಜು, ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ದುರ್ಗಾಶ್ರೀಕಾಂತ್, ಶಾಲಾ ಸಮಿತಿ ಅಧ್ಯಕ್ಷೆ ಶಾಂತಮ್ಮ, ಕಾರ್ಯದರ್ಶಿಗಳಾದ ಡಿ.ವಿನಯ್, ಸಿ.ಆನಂದ, ಶಿಕ್ಷಕ ಪಿ.ವಿ.ಸುರೇಶಬಾಬು, ಕನ್ನಡಪರ ಸಂಫಟನೆ ಮುಖಂಡರಾದ ಎನ್.ನಾಗರಾಜು, ಗಿರೀಶ್, ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net