

ಚಿಕ್ಕಬಳ್ಳಾಪುರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕ್ಷೇತ್ರ ಪ್ರಚಾರ ಕಾರ್ಯಕ್ರಮದಡಿ ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಹರೀಶ್ ತಮಟೆ ಬಾರಿಸುವುದರೊಂದಿಗೆ ಜಾಗೃತಿ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ಜಿಲ್ಲಾ ಉದ್ಯೋಗಾಧಿಕಾರಿ ಎಂ.ಪ್ರಸಾದ್, ಜಿಲ್ಲಾ ಅಂತರ್ಜಲ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಹಿರಿಯ ವಿಜ್ಞಾನಿ ಬೋರಪ್ಪ, ಕಲಾತಂಡಗಳ ನಾಯಕರಾದ ಮಂಜುನಾಥ, ನಾರಾಯಣಸ್ವಾಮಿ ಮತ್ತಿತರರು ಇದ್ದರು. ಚಿಂತಾಮಣಿ ತಾಲೂಕಿನ ಸಿದ್ದಾರ್ಥ ಯುವ ಕ್ರೀಡಾ ಸಾಂಸ್ಕತಿಕ ಅಭಿವೃದ್ಧಿ ಸಂಘ ಮತ್ತು ಡಾ. ಭೀಮ್ ಟ್ರಸ್ಟ್ ಕಲಾತಂಡಗಳಿಂದ ಜಾನಪದ ಸಂಗೀತ ಕಾರ್ಯಕ್ರಮ ಮತ್ತು ಬೀದಿ ನಾಟಕ ಪ್ರದರ್ಶನ ಕೈಗೊಂಡಿದ್ದು ಚಿಂತಾಮಣಿ ತಾಲೂಕಿನ ಕೈವಾರ, ಬಟ್ಲಹಳ್ಳಿ, ಬುರುಡುಗುಂಟೆ, ಇರಗಂಪಲ್ಲಿ, ಮುರಗಮಲ್ಲ, ನಂದಿಗಾನಹಳ್ಳಿ, ಭೂಮಿಶೆಟ್ಟಿಹಳ್ಳಿ, ಕೆಂಚಾರ್ಲಹಳ್ಳಿ, ರಾಗುಟ್ಟಹಳ್ಳಿ, ಕೋಟಗಲ್ಲು ಮತ್ತು ಬಾಗೇಪಲ್ಲಿ ತಾಲೂಕಿನ ನಲ್ಲಗುಟ್ಲಪಲ್ಲಿ, ರಾಚ್ಚೇರುವು, ಪುಲಗಲ್ಲು, ಮಿಟ್ಟೇಮರಿ, ಸೋಮನಾಥಪುರ, ಬಿಳ್ಳೂರು, ನಾರೇಮದ್ದೇಪಲ್ಲಿ, ಪಾಳ್ಯಕೆರೆ, ಚಾಕವೇಲು, ಚೇಳೂರಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ.
4ಸಿಬಿಪಿ3: ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಹರೀಶ್ ತಮಟೆ ಬಾರಿಸುವುದರೊಂದಿಗೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ಜಿಲ್ಲಾ ಉದ್ಯೋಗಾಧಿಕಾರಿ ಎಂ.ಪ್ರಸಾದ್ ಮತ್ತಿತರರು ಇದ್ದರು.