

ಮೈಸೂರು: ಕಠಿಣ ಪರಿಶ್ರಮ ಹಾಗೂ ಒಳ್ಳೆಯ ಕನಸು ಇದ್ದರೆ ಮಾತ್ರ ಕ್ರೀಡಾಪಟು ತನ್ನ ಜೀವನದಲ್ಲಿ ಏನಾದರೂ ಸಾಧಿಸಬಲ್ಲ ಎಂದು ಭಾರತದ ಮಹಿಳಾ ವಾಲಿಬಾಲ್ ತಂಡದ ತರಬೇತುದಾರರಾದ ನೈರುತ್ಯ ರೈಲ್ವೆ ಅಧೀಕ್ಷಕಿ ಎಚ್.ಎನ್.ಹೇಮಲತಾ ಎಂದು ಅಭಿಪ್ರಾಯಪಟ್ಟರು.
ನಗರದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ಕ್ರಿಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿರುವುದು ಮಾತ್ರವಲ್ಲದೇ ಉತ್ತಮ ಪ್ರದರ್ಶನ ನೀಡುತ್ತಿರುವದನ್ನ ಕಂಡು ನನ್ನ ಬಾಲ್ಯದ ದಿನಗಳು ನೆನಪಾಗುತ್ತಿವೆ ಎಂದರು.
ಪ್ರಾಂಶುಪಾಲೆ ಡಾ.ಟಿ.ರೂತ್ ಶಾಂತಕುಮಾರಿ ಮಾತನಾಡಿ, ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಕ್ರೀಡಾಪಟು ಪಡೆಯುವ ಚಿನ್ನದ ಪದಕವು ಕೆಲ ದಿನಗಳ ಕಳೆದಂತೆ ಮಾಸು ಹೋಗುತ್ತದೆ. ಆದರೆ, ಸ್ಪರ್ಧೆಯಲ್ಲಿ ಪ್ರತಿಯೊಬ್ಬ ಕ್ರೀಡಾಪಟು ಮೈದಾನದಲ್ಲಿ ಉತ್ತಮ ಸ್ನೇಹ ಬಾಂಧವ್ಯ ಬೆಳೆಸಿಕೊಳ್ಳುವುದನ್ನ ಕಲಿಯಬೇಕು. ಜೀವನದಲ್ಲಿ ಎಲ್ಲದಕ್ಕಿಂತ ದೊಡ್ಡದು ಸ್ನೇಹ ಸಂಬಂಧ ಎಂದು ಹೇಳಿದರು.
ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕರಾಟೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಜಸ್ನಾ ಜೋಸೆಫ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ರೆವರೆಂಡ್ ಫಾದರ್ ಬರ್ನಾಡ್ ಪ್ರಕಾಶ್ ಬಾರ್ನಿಸ್, ವೈಸ್‌ರೆಕ್ಟರ್ ಮರಿಯಾ ಝೇವಿಯರ್, ನಿರ್ದೇಶಕ ಆರ್ತ್‌ಬರ್ಟ್ ಪಿಂಟೊ ಇತರರು ಇದ್ದರು.
** ಫೋಟೋ ಇದೆ---
ನಗರದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಕ್ರಿಡೋತ್ಸವದಲ್ಲಿ ಕರಾಟೆಯಲ್ಲಿ ಸಾಧನೆ ತೋರಿದ ಜಸ್ನ ಜೋಸೆಫ್ ಅವರನ್ನು ಸನ್ಮಾನಿಸಲಾಯಿತು. ಎಚ್.ಎನ್ ಹೇಮಲತ, ರೆವರೆಂಡ್ ಫಾದರ್ ಬರ್ನಾಡ್ ಪ್ರಕಾಶ್ ಬಾರ್ನಿಸ್, ಮರಿಯಾ ಝೇವಿಯರ್, ಆರ್ತ್‌ಬರ್ಟ್ ಪಿಂಟೊ ಇತರರು ಇದ್ದರು.
------------