ರಸ್ತೆ ನಿಯಮ ಪಾಲಿಸಿ ವಾಹನ ಚಲಾಯಿಸಿ

1-SGN-1 RASTE NIYAMA
Published on

ಶಿಗ್ಗಾಂವಿ: ರಸ್ತೆ ನಿಯಮ ಪಾಲಿಸುವ ಮೂಲಕ ಜಾಗರೂಕತೆಯಿಂದ ಸವಾರರು ವಾಹನ ಚಲಾಯಿಸಬೇಕು ಎಂದು ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್​ಐ ಪರಶುರಾಮ ನೀರೋಳ್ಳಿ ಹೇಳಿದರು.

ಪಟ್ಟಣದ ಹೊರವಲಯದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ವ್ಯಾಪ್ತಿಯ ವಾಹನ ಚಾಲಕರಿಂದ ಶುಕ್ರವಾರ ಆಯೋಜಿಸಿದ್ದ ಭಾರತೀಯ ಚಾಲಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಬಹುತೇಕ ಚಾಲಕರು ಟ್ರಾಫಿಕ್ ಹಾಗೂ ರಸ್ತೆ ನಿಯಮ ಅರಿತು ಸಾರ್ವಜನಿಕರು, ಪ್ರಯಾಣಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ವಾಹನ ಚಾಲನೆ ಮಾಡಬೇಕು ಎಂದರು. ಹಿರಿಯ ಚಾಲಕರನ್ನು ಸನ್ಮಾನಿಸಲಾಯಿತು. ಮಹಮ್ಮದಇಸೂಫ್ ದೊಡ್ಡಮನಿ, ಗಂಗಾಧರ ಅಣ್ಣಿಗೇರಿ, ಉಮೇಶ ಹಡಪದ, ಮಾರುತಿ ಬಡಿಗೇರ, ಶಂಕ್ರಪ್ಪ ಡವಗಿ, ಗೂಡುಮಿಯಾ ಬಾವರ, ನಿಸಾರಅಹಮದ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net