

ಜಿಲ್ಲೆಯ ವಿವಿಧ ಕಡೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮತ್ತು ಸಾಗಾಟ ಮಾಡುತ್ತಿದ್ದ ವಾಹನಗಳ ಮೇಲೆ ಸೋಮವಾರ ಪೊಲೀಸರು ದಾಳಿ ನಡೆಸಿ ಮದ್ಯದ ಬಾಕ್ಸ್‌ಗಳು, ಅನ್ನಭಾಗ್ಯ ಅಕ್ಕಿ ಚೀಲಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಗೋಕಾಕ ವಲಯ ವ್ಯಾಪ್ತಿಯ ಕಪರಟ್ಟಿ ಕ್ರಾಸ್‌ನ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 3.50 ಲಕ್ಷ ರೂ. ಮೌಲ್ಯದ 76 ಪೆಟ್ಟಿಗೆಯ ಒಟ್ಟು 656.640 ಲೀಟರನಷ್ಟು ಮದ್ಯದ ಬಾಕ್ಸ್‌ಗಳು, ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 52 ಲೀಟರ್ ಮದ್ಯದ ಬಾಕ್ಸ್‌ಗಳು, ಸವದತ್ತಿ ಚೆಕ್ ಪೋಸ್ಟ್‌ನಲ್ಲಿ 1.95 ಲಕ್ಷ ರೂ. ನಗದು ಹಾಗೂ 2.31 ಲಕ್ಷ ರೂ. ಮೌಲ್ಯದ ಹತ್ತು ಟನ್ ಅನ್ನಭಾಗ್ಯ ಅಕ್ಕಿ ಬ್ಯಾಗ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆ ಸಮೀಸುತ್ತಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯದ ಬಾಕ್ಸ್‌ಗಳನ್ನು ಸಂಗ್ರಹಿಸಿಕೊಳ್ಳುತ್ತಿರುವ ಕುರಿತು ಖಚಿತವಾದ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿ ಸುಮಾರು 5 ಲಕ್ಷ ರೂ. ಮೌಲ್ಯದ ಮದ್ಯದ ಬಾಕ್ಸ್‌ಗಳನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.