ಕುಡಿಯುವ ನೀರಿನಲ್ಲಿ ಹುಳು: ಚಟ್ಟೇಕಂಬ ಗ್ರಾಮಸ್ಥರ ದೂರು

CLK Neeru 17
Published on

ಚಳ್ಳಕೆರೆ: ತಾಲೂಕಿನ ಚನ್ನಮ್ಮನಾಗತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಚಟ್ಟೇಕಂಬ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಜಲದೊಂದಿಗೆ ಸಣ್ಣ ಹುಳಗಳು ಬರುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕೂಡಲೇ ಘಟಕ ದುರಸ್ತಿಗೊಳಿಸಿ, ನೀರನ್ನು ಪರೀಕ್ಷೆಗೊಳಪಡಿಸುವಂತೆ ಗ್ರಾಮದ ಜನಪ್ರತಿನಿಧಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ ರು, ಪಿಡಿಒ ಕರೆಸುತ್ತೇವೆ ಎಂದು ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ರೋಗಬಾಧೆ ಆತಂಕದಲ್ಲಿದ್ದೇವೆ ಎಂದು ಸಿ.ಜಿ. ತಿಪ್ಪೇಸ್ವಾಮಿ, ಚಲುಮಪ್ಪ, ನಾಗರಾಜ, ಬಸವರಾಜ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪಿಡಿಒ ಶಶಿರಾಜ್, ಈಚೆಗಷ್ಟೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ವಚ್ಛ ಮಾಡಿಸಲಾಗಿದೆ. ಪೈಪ್‌ಲೈನ್‌ನಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ಕೂಡಲೇ ಕ್ರಮ ವಹಿಸಲಾಗುವುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net