ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ

nrp water
ಸಿಂಸೆ ಸಾಮಾಜಿಕ ಅರಣ್ಯ ಇಲಾಖೆ ನರ್ಸರಿ ಬಳಿ ನಿರ್ಮಿಸಿರುವ ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿ.
Published on

ಎನ್.ಆರ್.ಪುರ: ಸಿಂಸೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ನರ್ಸರಿ ಪಕ್ಕದಲ್ಲಿ ಜಾನುವಾರುಗಳಿಗೆ ಕುಡಿಯಲು ನೀರಿನ ತೊಟ್ಟಿ ನಿರ್ಮಿಸಿ ಮಾನವೀಯತೆ ಮೆರೆದಿದೆ.

ಸ್ಥಳೀಯವಾಗಿ ಜಾನುವಾರುಗಳು ಹೆಚ್ಚು ಇದ್ದು, ಸುತ್ತಮುತ್ತ ಎಲ್ಲೂ ಕುಡಿಯುವ ನೀರಿನ ಮೂಲ ಇಲ್ಲದಿರುವುದರಿಂದ ಅರಣ್ಯ ಇಲಾಖೆ ನೀರಿನ ತೊಟ್ಟಿ ನಿರ್ಮಿಸಿದೆ. ಬಿಸಿಲಿನ ಝಳ ಅತಿಯಾಗಿರುವುದರಿಂದ ಹಳ್ಳಗಳಲ್ಲಿ ನೀರಿನ ಅಭಾವವಿದೆ. ಹೀಗಾಗಿ ಜಾನುವಾರುಗಳಿಗಾಗಿ ಸುಮಾರು 500 ಲೀಟರ್ ಸಾಮರ್ಥ್ಯವುಳ್ಳ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಲಾಗಿದೆ ಎಂದು ಪ್ರಭಾರ ಸಾಮಾಜಿಕ ಅರಣ್ಯ ವಲಯಾಧಿಕಾರಿ ಈಶ್ವರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net