

ಸಾಸ್ವೆಹಳ್ಳಿ: ಹೋಬಳಿಯ ಮನೆಯೊಂದರ ಕುಡಿಯುವ ನೀರಿನಲ್ಲಿ ವಿಚಿತ್ರ ಹುಳು ಕಂಡುಬಂದಿದೆ. ಕೂದಲಿನ ಗಾತ್ರ ಹಾಗೂ ಕಪ್ಪು ಬಣ್ಣದ 8 ರಿಂದ 10 ಸೆಮೀ ಉದ್ದನೆಯ ವಿಚಿತ್ರ ಹುಳು ನಲ್ಲಿ ನೀರಿನಲ್ಲಿ ಬಂದಿದೆ.
ಈ ವಿಷಯ ತಿಳಿದ ಸ್ಥಳೀಯ ಗ್ರಾಪಂನವರು ಕೂಡಲೇ ಎಚ್ಚೆತ್ತುಕೊಂಡು ಗ್ರಾಮದ ಎಲ್ಲ ಓವರ್ಹೆಡ್ ಟ್ಯಾಂಕ್, ಚರಂಡಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಸ್ಥಳೀಯ ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮದ ಸ್ವಚ್ಛತೆಯಲ್ಲಿ ನಿರ್ಲಕ್ಷ ಧೋರಣೆ ತೋರುತ್ತಿರುವುದಾಗಿ ಗ್ರಾಮದ ಮಹಿಳೆಯರು ಆರೋಪಿಸಿದರು.