168.12 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ

Kin_Foundation-stone
Published on

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಬಜ್ಪೆ ಮತ್ತು ಮೂಲ್ಕಿ ಪಟ್ಟಣ ಪಂಚಾಯಿತಿಗೆ 168.12 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಭವಿಷ್ಯದ ಯೋಚನೆ, ಯೋಜನೆಯಲ್ಲಿ ಕೇಂದ್ರ ಸರ್ಕಾರದ ಅಮೃತ 2.0 ಯೋಜನೆಯಲ್ಲಿ ಈ ನೀರಿನ ಘಟಕ ಕಾರ್ಯರೂಪಕ್ಕೆ ಬರಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್​ ಹೇಳಿದರು.

ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಮೂರು ಕಾವೇರಿ ಬಳಿ ಅಮೃತ 2.0 ಯೋಜನೆಯ ನೀರಿನ ಘಟಕಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು.

ಗುರುಪುರ ನದಿಯಲ್ಲಿ ಜಾಕ್​ವೆಲ್​ ನಿರ್ಮಿಸಿ ಅಲ್ಲೇ ಶುದ್ಧೀಕರಣ ಘಟಕ ಸ್ಥಾಪಿಸಿ ಬಜ್ಪೆ, ಕಿನ್ನಿಗೋಳಿ ಮತ್ತು ಮೂಲ್ಕಿಗೆ ನೀರು ಸರಬರಾಜು ಮಾಡಲಾಗುತ್ತದೆ. ಇದಕ್ಕಾಗಿ ಕೆಲವೆಡೆ ಟ್ಯಾಂಕ್​ ನಿರ್ಮಿಸಲಾಗುತ್ತದೆ. ಮುಂದಿನ 30 ವರ್ಷಗಳ ಅವಧಿವರೆಗೆ ನೀರಿನ ಯಾವುದೇ ಕೊರತೆ ಆಗಬಾರದು ಎಂಬ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಪ್ರಮುಖರಾದ ಭುವನಾಭಿರಾಮ ಉಡುಪ, ಈಶ್ವರ್​ ಕಟೀಲ್​, ಸತೀಶ್​ ಅಂಚನ್​, ಅಭಿಲಾಷ್​ ಶೆಟ್ಟಿ ಕಟೀಲ್​, ಸರೋಜಿನಿ ಗುಜರನ್​, ಬೇಬಿ ಕೆಮ್ಮಡೆ, ಸಂಜಯ್​ ಮೂರುಕಾವೇರಿ, ತಾರಾನಾಥ ಶೆಟ್ಟಿ, ಶೈಲೇಶ್​ ಮೂಲ್ಕಿ, ಸುಭಾಷ್​ ಶೆಟ್ಟಿ, ಅರುಣ್​ ಮಲ್ಲಿಗೆಯಂಗಡಿ, ಯತೀಶ್​, ರಘುವೀರ್​ ಕಾಮತ್​, ಅಸಿಸ್ಟೆಂಟ್​ ಇಂಜಿನಿಯರ್​ ಶೋಭಾಲಕ್ಷಿ$್ಮ, ಗುತ್ತಿಗೆದಾರ ನಂದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net