ಬೋಡಬಂಡೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಕುಡಿಯುವ ನೀರಿಗೆ ಪರದಾಟ

28_Krt_ph_01 new
Published on

ಕೊರಟಗೆರೆ: ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಡಬಂಡೇನಹಳ್ಳಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಕುಡಿಯಲು ಹಾಗೂ ಅಡುಗೆ ತಯಾರು ವಾಡಲು ಶುದ್ಧನೀರಿಗೂ ಪರದಾಡಬೇಕಾದ ಸ್ಥಿತಿ ನಿರ್ವಾಣವಾಗಿದೆ.

ಗ್ರಾಪಂ ಆಡಳಿತದ ನಿರ್ಲಕ್ಷ್ಯದಿಂದ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಪಕ್ಕದಲ್ಲೇ ಶುದ್ಧ ಕುಡಿಯುವ ನೀರಿನ ಟಕವಿದ್ದರೂ ಬೇರೆಡೆ ನೀರಿಗೆ ಆಶ್ರಯ ಪಡೆಯುವಂತಾಗಿದೆ. ಸರ್ಕಾರ ಶುದ್ಧ ಕುಡಿಯುವ ನೀರಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ವಾಡಿ, ಕುಡಿಯುವ ನೀರಿನ ಟಕಗಳನ್ನು ನಿರ್ಮಿಸಿದರೂ ಪ್ರಯೋಜನವಾಗುತ್ತಿಲ್ಲ.

ಶಾಲೆ ಪಕ್ಕದಲ್ಲಿರುವ ಕುಡಿಯುವ ನೀರಿನ ಟಕದಿಂದ ಮಕ್ಕಳಿಗೆ ನೀರು ಕೊಡಲು ನಿರಾಕರಿಸುತ್ತಿದಾರೆ. ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಗಮನಹರಿಸಿಲ್ಲ.

ತಾಲೂಕಿನಲ್ಲಿರುವ ಶುದ್ಧ ನೀರಿನ ಟಕಗಳಿಗೆ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯಿಂದ ನೀರು ಒದಗಿಸಲಾಗುತ್ತಿದೆ. ಆದರೂ ಕುಡಿಯುವ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಖಾಸಗಿ ಗುತ್ತಿಗೆದಾರರಿಂದ ಎರಡು ರೂಪಾಯಿಗೆ ಸಿಗಬೇಕಾದ 20 ಲೀಟರ್ ನೀರಿಗೆ 5 ರೂ.ಗಿಂತ ಅಧಿಕ ಹಣ ಪಡೆಯಲಾಗುತ್ತುದೆ.

ಶಾಲೆ ಹಾಗೂ ಅಂಗನವಾಡಿಗಳಿಗೆ ನೀರು ನೀಡಲು ಕುಡಿಯುವ ನೀರಿನ ಟಕದಿಂದ ಹಣ ತೆಗೆದುಕೊಳ್ಳಬಾರದೆಂದು ಟಕದ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಆದರೂ ಕೆಲವು ಟಕಗಳ ನೀರು ವಿತರಕರು ಹಣದ ಆಸೆಗಾಗಿ ಮಕ್ಕಳಿಗೆ ಕುಡಿಯಲು ನೀರು ಕೊಡಬೇಕಾದರೂ ಹಣದ ಮೊರೆ ಹೋಗುತ್ತಿರುವುದು ವಿಷಾದನೀಯ. ರಾಮಣ್ಣ ಸ್ಥಳೀಯ ಟಕದ ಗುತ್ತಿಗೆದಾರರು ಗುತ್ತಿಗೆ ಅವಧಿ ಮುಗಿದರೂ ಗ್ರಾಪಂ ಟಕದ ಜವಾಬ್ದಾರಿಯನ್ನು ಆಯಾ ಗ್ರಾಪಂಗೆ ನೀಡದೆ ಹಣದ ಆಸೆಗಾಗಿ ಅವರೇ ಮುಂದುವರಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ತಾಲೂಕಿನ ಎಲ್ಲ ಗ್ರಾಪಂ ಅಧಿಕಾರಿಗಳು, ಗುತ್ತಿಗೆದಾರರಿಗೂ ಆದೇಶದ ಪ್ರತಿ ಹೊರಡಿಸುತ್ತೇನೆ. ರಂಗಪ್ಪ ಎಇಇ, ಸಣ್ಣ ನೀರಾವರಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net