ಕುಡಿವ ನೀರು ಪೂರೈಕೆಗೆ ಕ್ರಮವಹಿಸಲು ಪತ್ರ

21 KNK 01
ಹಿರೇಖೇಡ ಗ್ರಾಪಂ ಪಿಡಿಒಗೆ ತಾಪಂ ಇಒ ರಾಜಶೇಖರ ಬರೆದ ಸೂಚನಾ ಪತ್ರ.
Published on

ಕನಕಗಿರಿ: ತಾಲೂಕಿನ ಮಲ್ಲಿಗೆವಾಡ ಗ್ರಾಮಕ್ಕೆ ಶುದ್ಧ ಕುಡಿವ ನೀರು ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ ತಾಪಂ ಇಒ ರಾಜಶೇಖರ ಗ್ರಾಪಂ ಪಿಡಿಒ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.

ಮಲ್ಲಿಗೆವಾಡ ಗ್ರಾಮವು ಕೆರೆಯಂಚಿನಲಿದ್ದು, ಕೆರೆ ಹಿನ್ನೀರು ಹತ್ತಿರವಾಗಿದೆ. ಆದರೆ, ಗ್ರಾಮಸ್ಥರು ಶುದ್ಧ ಕುಡಿವ ನೀರು ತರಲು ಮೂರು ಕಿ.ಮೀ ದೂರದ ಕೆ.ಕಾಟಾಪುರ ಗ್ರಾಮಕ್ಕೆ ತೆರಳಬೇಕಿತ್ತು.

ಇದರಿಂದ ಗ್ರಾಮಸ್ಥರಿಗೆ ಹೊರೆಯಾಗಿತ್ತಲ್ಲದೇ, ಸಮಯ ವ್ಯರ್ಥವಾಗುತ್ತಿತ್ತು. ಇದರಿಂದ ಎಚ್ಚೆತ್ತ ತಾಪಂ ಇಒ ರಾಜಶೇಖರ ಅವರು ಗ್ರಾಪಂ ಪಿಡಿಒ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತುರ್ತಾಗಿ ಕ್ರಮ ಕೈಗೊಂಡು ವರದಿ ನೀಡಲು ಸೂಚಿಸಿ ಪತ್ರ ಬರೆದಿದ್ದಾರೆ. ಪ್ರತಿಯನ್ನು ಜಿಪಂ ಸಿಇಒ ಹಾಗೂ ಗ್ರಾಮೀಣ ಕುಡಿವ ನೀರು ಹಾಗೂ ನೈರ್ಮಲ್ಯ ವಿಭಾಗದ ಎಇಇರಿಗೂ ಕಳುಹಿಸಿದ್ದಾರೆ. ಈ ಕುರಿತು ಏ.21ರಂದು ‘ಕೆರೆಯಂಚಿನ ಮಲ್ಲಿಗೆವಾಡಕ್ಕಿಲ್ಲ ಕುಡಿವ ನೀರು’ ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ವರದಿ ಪ್ರಕಟಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net