

ಹೂವಿನಹಡಗಲಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹಿಳೆಯರು ಮನೆ ಮತ್ತು ಇತರ ಭಾಗಗಳಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಕಾಳಜಿ ವಹಿಸುತ್ತಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಹಾಗೂ ಇತರ ಮಹಿಳೆಯರಿಂದ ಈ ಕೆಲಸ ಪ್ರಾರಂಭವಾಗಿದ್ದು.
ಈಗಾಲೇ ತಾಲೂಕಿನ ಕೋಯಿಲಾರಗಟ್ಟಿ, ಸೋವೇನಹಳ್ಳಿ, ಶಿವಲಿಂಗನಹಳ್ಳಿ, ವಿನೋಭನಗರ, ಉತ್ತಂಗಿ, ದೇವಗೊಂಡನಹಳ್ಳಿ, ಅಡವಿಮಲ್ಲನಕೇರಿ, ಸೋಗಿ, ನಂದಿಹಳ್ಳಿ, ಹೊಳಗುಂದಿ, ಹಕ್ಕಂಡಿ, ಹಿರೇಮಲ್ಲನಕೇರಿ, ಪಟ್ಟಣದ ರಾಜೀವನಗರ ಸೇರಿದಂತೆ ಇತರ ಭಾಗದಲ್ಲಿನ ಮಹಿಳೆಯರು ತಮ್ಮ ಮನೆ ಹಾಗೂ ಕೈ ತೋಟದಲ್ಲಿ ಪಕ್ಷಿಗಳಿಗೆ ಆಹಾರವನ್ನು ಹಾಗೂ ಬಾಟಲಿ, ತಟ್ಟೆಗಳಲ್ಲಿ ಕುಡಿಯುವ ನೀರು ಹಾಕಿ ಗಿಡ, ಮರಗಳಿಗೆ ತೂಗುಬಿಡುತ್ತಿದ್ದಾರೆ.