ಕುಡಿವ ನೀರು ಸಮರ್ಪಕ ಪೂರೈಸಲು ಕುಪ್ಪಿಗುಡ್ಡ ಗ್ರಾಮಸ್ಥರ ಒತ್ತಾಯ

250522 Kuppigudda Villagers Appeal for Water
ಲಿಂಗಸುಗೂರು ತಾಪಂ ಕಚೇರಿ ನೌಕರ ಮಂಜುನಾಥ ಜಾವೂರಗೆ ಕುಪ್ಪಿಗುಡ್ಡ ಗ್ರಾಮಸ್ಥರು ಬುಧವಾರ ಮನವಿ ಸಲ್ಲಿಸಿದರು.
Published on

ಲಿಂಗಸುಗೂರು: ಸರ್ಜಾಪುರ ಗ್ರಾಪಂ ವ್ಯಾಪ್ತಿಯ ಕುಪ್ಪಿಗುಡ್ಡ ಗ್ರಾಮಕ್ಕೆ ಕುಡಿವ ನೀರು ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಪಂ ನೌಕರ ಮಂಜುನಾಥ ಜಾವೂರಗೆ ಗ್ರಾಮಸ್ಥರು ಬುಧವಾರ ಮನವಿ ಸಲ್ಲಿಸಿದರು.

ಹೊನ್ನಳ್ಳಿ ಬಳಿಯ ರಾಜೀವ್ ಗಾಂಧಿ ಟೆಕ್ನಾಲಜಿ ಕುಡಿವ ನೀರು ಯೋಜನೆ ವ್ಯಾಪ್ತಿಯ ಕುಪ್ಪಿಗುಡ್ಡ ಗ್ರಾಮದಲ್ಲಿ ನೀರು ಸರಬರಾಜು ಮಾಡುವ ಮೋಟಾರ್ ಪಂಪ್ ಮೇಲಿಂದ ಮೇಲೆ ದುರಸ್ತಿಗೆ ಬರುತ್ತಿದೆ. ಇದರಿಂದ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ಕುಡಿವ ನೀರಿನ ತೊಂದರೆಯಾಗಿದೆ. ಲಿಂಗಸುಗೂರಿನಿಂದ ನಿತ್ಯ ಶುದ್ಧ ಕುಡಿವ ನೀರು ತರುವ ಪರಿಸ್ಥಿತಿ ಬಂದಿದೆ. ಕೂಡಲೇ ತಾಂತ್ರಿಕ ತೊಂದರೆ ನಿವಾರಿಸಿ ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ಆಗ್ರಹಿಸಿದರು. ಗ್ರಾಮಸ್ಥರಾದ ಭಗೀರಥ, ನಿಜಗುಣಿ, ಅಂಬಣ್ಣ, ಬಸಣ್ಣ ನಾಯಕ, ಅಮರೇಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net