

Clove Water : ಬದಲಾಗುತ್ತಿರುವ ಹವಾಮಾನದಲ್ಲಿ ಕೆಟ್ಟ ಜೀವನಶೈಲಿಯ ಪರಿಣಾಮದಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇವೆ. ವಾತಾವರಣ ಬದಲಾಗಿರುವುದರಿಂದ ಹೆಚ್ಚಿನ ಜನರು ಶೀತ, ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ನೀವು ಔಷಧಿಗಳೊಂದಿಗೆ ಕೆಲವು ಮನೆಮದ್ದುಗಳನ್ನು ತೆಗೆದುಕೊಳ್ಳಬೇಕು.
ಆಯುರ್ವೇದ ಔಷಧವು ರೋಗಗಳ ವಿರುದ್ಧ ಹೋರಾಡುವ ನಮ್ಮ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನಿಮ್ಮ ಆಹಾರದಲ್ಲಿ ನೀವು ಸೇರಿಸಬಹುದಾದ ಹಲವು ಅಂಶಗಳಿವೆ. ಲವಂಗವು ಅಂತಹ ಪರಿಣಾಮಕಾರಿ ವಸ್ತುವಾಗಿದೆ.
ಮಸಾಲೆಗಳಲ್ಲಿ ಬಳಸುವ ಲವಂಗದ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಶೀತ ಮತ್ತು ಕೆಮ್ಮಿನಂತಹ ಅನೇಕ ಋತುಮಾನದ ಕಾಯಿಲೆಗಳನ್ನು ದೂರವಿಡುತ್ತದೆ. ಲವಂಗದ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ.
ಲವಂಗದ ನೀರು ಮಾಡುವ ವಿಧಾನ: ಒಂದು ಪಾತ್ರಗೆ ಒಂದು ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸಿ ಕೊಳ್ಳಬೇಕು. ನಂತರ 2 ರಿಂದ 4 ಲವಂಗವನ್ನು ಸ್ವಲ್ಪ ಕುಟ್ಟಿ ಹಾಕಿ ಚೆನ್ನಾಗಿ ಕುದಿಸಬೇಕು. ಈಗ ಇದನ್ನು ಒಂದು ಗ್ಲಾಸ್ಗೆ ಹಾಕಿ ಬೆಚ್ಚಗೆ ಇರುವಾಗಲೇ ಸೇವಿಸಬೇಕು.
ಬೆಳಿಗ್ಗೆ ಲವಂಗದ ನೀರನ್ನು ಕುಡಿಯುವುದರಿಂದ ಏನು ಪ್ರಯೋಜನ? :
ಲವಂಗ ನೀರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಬದಲಾಗುತ್ತಿರುವ ವಾತಾವರಣದಲ್ಲಿ ನೆಗಡಿ, ಕೆಮ್ಮು, ಕಫದಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಲವಂಗವು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ಯಾವುದೇ ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದು ಋತುಮಾನದ ಕಾಯಿಲೆಗಳನ್ನು ದೂರವಿಡುತ್ತದೆ.
ಆಯುರ್ವೇದದಲ್ಲಿ, ವಾತ, ಪಿತ್ತ ಮತ್ತು ಕಫವನ್ನು ಎಲ್ಲಾ ರೋಗಗಳ ಮೂಲವೆಂದು ಪರಿಗಣಿಸಲಾಗುತ್ತದೆ. ಲವಂಗದ ನೀರು ಕುಡಿಯುತ್ತಾ ಬಂದ್ರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯನ್ನು ತಂಪಾಗಿರಿಸುತ್ತದೆ. ಲವಂಗದ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಕಿರಿಕಿರಿ ಮತ್ತು ಅಸಿಡಿಟಿ ಕಡಿಮೆಯಾಗುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗದ ನೀರನ್ನು ಕುಡಿಯುವುದರಿಂದ ಗ್ಯಾಸ್, ಅಸಿಡಿಟಿ, ಉಬ್ಬುವುದು ಮತ್ತು ಅಜೀರ್ಣವನ್ನು ಗುಣಪಡಿಸುತ್ತದೆ.ಲವಂಗದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಕಿಣ್ವಗಳು ಹೆಚ್ಚಾಗುತ್ತವೆ ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.
ಲವಂಗದ ನೀರು ತಂಪಾಗುತ್ತದೆ. ಇದು ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಯಲ್ಲಿ ಬಿಸಿಬಿಸಿ ಆಗಿ ಉರಿಯುವಂತೆ ಆಗುವುದನ್ನು ನಿವಾರಿಸುತ್ತದೆ. ಲವಂಗದ ನೀರನ್ನು ಕುಡಿಯುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗದ ನೀರನ್ನು ಕುಡಿಯುವುದು ಚಯಾಪಚಯವನ್ನು ವೇಗಗೊಳಿಸುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹಸಿವು ಕಡಿಮೆಯಾಗುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ಸಹ ನಿಯಂತ್ರಿಸಬಹುದು. ಬೊಜ್ಜು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವ ಜನರು ಲವಂಗ ನೀರನ್ನು ಕುಡಿಯಬಹುದು.
(ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ)