ಮದ್ಯಪಾನ ಆರೋಗ್ಯಕ್ಕೆ ಅಪಾಯಕಾರಿ

27 SR 1
Published on

ಶಿರಹಟ್ಟಿ: ಮದ್ಯವರ್ಜನ ಶಿಬಿರವು ಮದ್ಯಪಾನದ ಹಾನಿಗಳನ್ನು ಅರಿತು, ಅದನ್ನು ತ್ಯಜಿಸಲು ಜನರಿಗೆ ಪ್ರೇರಣೆ, ಮಾರ್ಗದರ್ಶನ ನೀಡುತ್ತದೆ. ವೈಯಕ್ತಿಕ ಆರೋಗ್ಯ, ಸಾಮಾಜಿಕ ಸ್ಥಿರತೆ ಮತ್ತು ಕುಟುಂಬದ ಸುಖವನ್ನು ಹೆಚ್ಚಿಸಲು ಸಹಾಯಕವಾಗಿವೆ ಎಂದು ಜನಜಾಗೃತಿ ಸಮಿತಿ ಯೋಜನಾಧಿಕಾರಿ ಎಸ್.ಆರ್. ನಾಗೇಶ ಹೇಳಿದರು.

ಪಟ್ಟಣದ ಶ್ರೀ ಫಕೀರೇಶ್ವರ ಶ್ರೀಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 2025- 26ನೇ ಸಾಲಿನ ಸಮುದಾಯ ಕಾರ್ಯಕ್ರಮಗಳ ಭಾಗವಾಗಿ ಗುರುವಾರ ಆಯೋಜಿಸಿದ್ದ ಮದ್ಯವರ್ಜನೆ ಶಿಬಿರದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಹಿರಿಯ ನಿರ್ದೇಶಕ ಯೋಗೇಶ ಎಸ್.ಆರ್. ಮಾತನಾಡಿ, ಶಿಬಿರಗಳು ಮದ್ಯಪಾನದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತವೆ. ಮದ್ಯಪಾನದಿಂದ ಕುಟುಂಬಗಳು ವಿಭಜನೆಯಾಗುತ್ತವೆ. ಈ ಶಿಬಿರಗಳು ಕುಟುಂಬ ಹಾಗೂ ಸಮಾಜದ ಶಾಂತಿಯ ಉಳಿವಿಗೆ ಸಹಕಾರಿಯಾಗುತ್ತವೆ ಎಂದರು.

ಸಭೆಯಲ್ಲಿ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ರಚಿಸಲಾಯಿತು. ಸಮಿತಿ ಅಧ್ಯಕ್ಷರಾಗಿ ಪ್ರಕಾಶ ಬೋರಶೆಟ್ಟರ್, ಉಪಾಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಅಶೋಕ ವರವಿ, ಅಲ್ಲಭಕ್ಷ ನಗಾರಿ, ಬಸವರಾಜ ತುಳಿ, ಡಾ. ಪವನ ಮಹೇಂದ್ರಕರ್, ಕೋಶಾಧಿಕಾರಿಯಾಗಿ ಈರಯ್ಯ ಹಿರೇಮಠ ಅವರನ್ನು ನೇಮಕ ಮಾಡಲಾಯಿತು. ಪುನೀತ್ ಓಲೇಕಾರ, ಸಂದೀಪ ಕಪ್ಪತ್ತನವರ, ಎಚ್.ಎನ್. ದೇವಗಿರಿ, ಫಕೀರೇಶ ರಟ್ಟಿಹಳ್ಳಿ, ಮಹಾಂತೇಶ ದಶಮನಿ, ನಂದಾ ಪಲ್ಲೇದ, ಅಶೋಕ ವರವಿ, ರವಿ ಗುಡಿಮನಿ, ತಿಪ್ಪಣ್ಣ ಕೊಂಚಿಗೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net