ಕುಡಿವ ನೀರಿನ ಸಮಸ್ಯೆಗೆ ಪರಿಹಾರ

2
ಬೋರಗಾಂವ ಪಟ್ಟಣದ ಆರ್.ಕೆ.ನಗರದಲ್ಲಿ ಸ್ಕೇರ್ ಸಿಟಿ ಯೋಜನೆಯಡಿ ಬೋರ್‌ವೆಲ್ ಅಗೆಯುವ ಕಾರ್ಯ ಜರುಗಿತು. ಶಿವಾಜಿ ಭೋರೆ, ಸುನೀಲ ಪಾಟೀಲ, ಬಾಬಾಸಾಬ ಚೌಗುಲೆ ಇತರರಿದ್ದರು
Published on

ಬೋರಗಾಂವ: ಹಲವಾರು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದ ಬೋರಗಾಂವ ಪಟ್ಟಣದ ಆರ್.ಕೆ.ನಗರದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಪ್ರಯತ್ನದಿಂದ ಸ್ಕೇರ್ ಸಿಟಿ ಯೋಜನೆಯಡಿ ಬೋರ್‌ವೆಲ್ ಕೊರೆಯುವ ಕಾರ್ಯ ಮಂಗಳವಾರ ಜರುಗಿತು.

ಬಿಜೆಪಿ ಮುಖಂಡ ಶಿವಾಜಿ ಭೋರೆ ಮಾತನಾಡಿ, ಆರ್.ಕೆ. ನಗರ ಸೇರಿ ಪಟ್ಟಣದ ವಿವಿಧೆಡೆ ನೀರಿನ ಸಮಸ್ಯೆ ಆಗದಂತೆ ಶಾಸಕಿ ಶಶಿಕಲಾ ಜೊಲ್ಲೆ ಅವರು ಜಲಕುಂಭ ನಿರ್ಮಿಸಿ ಎಲ್ಲರಿಗೂ ಕುಡಿಯಲು ನೀರು ದೊರಕುವಂತೆ ಮಾಡಿದ್ದಾರೆ. ಸಮಸ್ಯೆ ಕುರಿತು ಪ್ರಸ್ತಾಪಿಸಿದ ಕೂಡಲೇ ಬೋರ್‌ವೆಲ್‌ಗೆ ಅನುಮೋದನೆ ನೀಡಿ ಸಮಸ್ಯೆಯಿಂದ ಪಾರು ಮಾಡಿದ್ದಾರೆ ಎಂದರು.

ಬಿಜೆಪಿ ಮುಖಂಡ ಸುನೀಲ ಪಾಟೀಲ, ರಮೇಶ ಮಾಲಗಾವೆ, ಶಿವಾಜಿ ಭೋರೆ, ಬಾಬಾಸಾಹೇಬ ಚೌಗುಲೆ, ಅಜಿತ ಕಾಂಬಳೆ, ಫಿರೋಜ್ ಅಫರಾಜ, ಮಹಿಪತಿ ಖೋತ, ದೇವ ಮಾಳಿ, ಅಭಿಷೇಕ ಫಿರಗಣ್ಣವರ, ಶಶಿರ ಸಾತಪುತೆ, ನಾರಾಯಣ ಅಡೇಕರ, ಕಾಕಾಸಾಹೇಬ ವಾಘಮೋಡೆ, ಉದಯ ಪವಾರ, ವಸಂತ ಭೋರೆ, ಶಿವಾಜಿ ನರುಟೆ, ರಾಮಚಂದ್ರ ಪವಾರ, ಸಂತೋಷ ಪೂಜಾರಿ, ಬಾಬು ಪಾಟೀಲ, ನಿಖಿಲ ಚಿಪ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net