ಕುಡಿವ ನೀರಿನ ಸಮಸ್ಯೆ ಪರಿಹರಿಸದಿದ್ದರೆ ಕ್ರಮ

12..11
ತೆಲಸಂಗ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ತೋಡುತ್ತಿರುವ ತೆರೆದ ಬಾವಿ ಕಾಮಗಾರಿಯನ್ನು ರವಿ ಬಂಗಾರೆಪ್ಪನವರ ಪರಿಶೀಲಿಸಿದರು. ವಿಲಾಸ್ ಮೋರೆ, ಸಿದ್ದಲಿಂಗ ಮಾದರ, ರಾಮು ನಿಡೋಣಿ, ಸಿ.ಸಿ.ಪಾಟೀಲ, ದಿಲೀಪ ಸುತಾರ, ಪರಸು ಕಂದಾರೆ ಇತರರಿದ್ದರು.
Published on

ತೆಲಸಂಗ: ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ತೋಡುತ್ತಿರುವ ತೆರೆದ ಬಾವಿ ಕಾಮಗಾರಿ ಸ್ಥಳಕ್ಕೆ ಸೋಮವಾರ ಬೆಳಗಾವಿ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ಭೇಟಿ ನೀಡಿ ಪರಿಶೀಲಿಸಿದರು.

ಕಾಮಗಾರಿ ಪ್ರಗತಿ ಬಗ್ಗೆ ಆಡಳಿತಾತ್ಮಕ ಅಡಚಣೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ ರವಿ, ಮಳೆ ಇಲ್ಲದೆ ಜನ ಕಂಗಾಲಾಗಿದ್ದಾರೆ. ಕುಡಿಯುವ ನೀರೊದಗಿಸಲು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬೇಸಿಗೆ ನಿರ್ವಹಣೆ ಕಷ್ಟವಾದೀತು. ನಿರ್ಲಕ್ಷೃ ತೋರುವ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಅಳಲು ತೋಡಿಕೊಂಡ ಜನ: ಹೊಳೆಯಲ್ಲಿ ನೀರಿದ್ದರೂ ಗ್ರಾಮಗಳಿಗೆ ಸೂಕ್ತವಾಗಿ ಒದಗಿಸಲು ತಾಲೂಕಾಡಳಿತಕ್ಕೆ ಆಗುತ್ತಿಲ್ಲ. ದೂರು ನೀಡಿದಾಗ ಮಾತ್ರ ಒಂದೆರೆಡು ದಿನ ಕೆಲಸ ಮಾಡುವ ಅಧಿಕಾರಿಗಳು ಮತ್ತೆ ಅದೇ ಚಾಳಿ ಮುಂದುವರಿಸುತ್ತಾರೆ. ಇದರಿಂದ ಗ್ರಾಮಕ್ಕೆ ಕುಡಿಯುವ ನೀರು 15 ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ದೊರೆಯುತ್ತದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

ಗ್ರಾಪಂ ಅಧ್ಯಕ್ಷ ವಿಲಾಸ್ ಮೋರೆ, ಸದಸ್ಯ ಸಿದ್ದಲಿಂಗ ಮಾದರ, ರಾಮು ನಿಡೋಣಿ, ಸಿ.ಸಿ.ಪಾಟೀಲ, ದಿಲೀಪ ಸುತಾರ, ಪರಸು ಕಂದಾರೆ, ಸಿದ್ದು ಕೊಕಟನೂರ, ಸಂಗಮೇಶ ಕುಮಠಳ್ಳಿ, ಮಹೇಶ ಕುಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net