

ಅರಕೇರಾ: ಮುಷ್ಟೂರು ಗ್ರಾಮದ ವಡ್ಡರ ಓಣಿಯಲ್ಲಿ ಕುಡಿವ ನೀರಿನ ಸಮಸ್ಯೆಯನ್ನು ಗ್ರಾಪಂ ಆಡಳಿತ ಸೋಮವಾರ ನಿವಾರಿಸಿದೆ. ನೀರಿನ ಮಾದರಿ ಪರೀಕ್ಷಿಸಿ ಮನೆ ಮನೆಗೆ ನೀರು ಸರಬರಾಜಿಗೆ ಕ್ರಮ ವಹಿಸಿದ್ದಾರೆ.
ಹಲವು ತಿಂಗಳ ಹಿಂದೆ ಕೊರೆಯಿಸಿದ್ದ ಕೊಳವೆಬಾವಿಗೆ ಪೈಪ್‌ಲೈನ್, ಮೋಟಾರು ಸಂಪರ್ಕ ಕಲ್ಪಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಿಡಿಒ ಸೂಗಪ್ಪ ಖಾನಾಪೂರ ಅವರನ್ನು ಕೆಲ ದಿನಗಳ ಹಿಂದೆ ತರಾಟೆಗೆ ತೆಗೆದುಕೊಂಡಿದ್ದರು. ಗ್ರಾಮದಲ್ಲಿನ ಹಲವಾರು ಸಮಸ್ಯೆಗಳ ನಿವಾರಿಸುವಲ್ಲಿ ವಿಫಲರಾಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕಾರಣದಿಂದಾಗಿ ಇತ್ತೀಚೆಗೆ ಚರಂಡಿ ತ್ಯಾಜ್ಯ ತೆರವು ಹಾಗೂ ಗ್ರಾಪಂ ಕಚೇರಿ ಹತ್ತಿರವಿರುವ ಬೋರ್‌ವೆಲ್ ದುರಸ್ತಿಗೆ ಕ್ರಮ ಕೈಗೊಂಡಿದ್ದರು.