ಮೂಗು ಮುಚ್ಚಿಕೊಂಡು ಜನರ ಸಂಚಾರ

IMG_20240404_120151_72.jpg
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ರಂಭಾಪುರಿ ಕಲ್ಯಾಣ ಮಂಟಪ ಎದುರು ಒಳಚರಂಡಿ ಕೊಳಚೆ ಮುಕ್ತವಾಗಿ ಹರಿಯುತ್ತಿದ್ದು, ಇಲ್ಲಿನ ಜನರು ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದಾರೆ.

ಕಳೆದ ಕೆಲ ದಿನಗಳಿಂದ ಒಳಚರಂಡಿ ಕೊಳಚೆ ರಸ್ತೆಯಲ್ಲಿ ಹರಿಯುತ್ತಿದೆ. ಅಲ್ಲಲ್ಲಿ ಕೊಳಚೆ ಸಂಗ್ರಹವಾಗಿ ಗಬ್ಬು ವಾಸನೆ ಹರಡಿದೆ.

ವಾಹನಗಳು ಹಾಯ್ದು ಹೋದಾಗ ಕೊಳಚೆಯು ಚಕ್ರಗಳಿಗೆ ಸಿಲುಕಿ ಅಕ್ಕಪಕ್ಕ ಚಿಮ್ಮುತ್ತಿದೆ. ಬೈಕ್ ಸವಾರರು, ಪಾದಚಾರಿಗಳು ಇದರಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇಲ್ಲಿ ಪಾದಚಾರಿಗಳು ಓಡಾಡುವುದೇ ಕಷ್ಟಕರವಾಗಿದೆ.

ಬಿವಿಬಿ ಎದುರಿನ ರಸ್ತೆಯಿಂದ ರಂಭಾಪುರಿ ಕಲ್ಯಾಣ ಮಂಟಪಕ್ಕೆ ಹೋಗುವ ದಾರಿಯಲ್ಲಿ ಚರಂಡಿ ಒಡೆದು ಕೊಳಚೆ ಹೊರಚೆಲ್ಲುತ್ತಿದೆ. ಕೊಳಚೆಯು ರಸ್ತೆ ಆವರಿಸುತ್ತಿರುವುದರಿಂದ ಸುತ್ತಮುತ್ತಲಿನ ಜನರು, ಅಂಗಡಿಕಾರರು ದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ.

ಮಹಾನಗರ ಪಾಲಿಕೆ ಅಧಿಕಾರಿಗಳು ಇನ್ನಾದರೂ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಪರಿಹಾರ ಮಾಡಬೇಕು. ಕೊಳಚೆ ಕಿರಿಕಿರಿಯಿಂದ ಮುಕ್ತಿ ನೀಡಬೇಕು ಎಂಬುದು ಜನರ ಆಗ್ರಹ.
& ವಿದ್ಯಾನಗರ ನಿವಾಸಿಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net