

ಲಿಂಗಸುಗೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ಪಟ್ಟಣದಲ್ಲಿ ಭಾನುವಾರ 80 ಕ್ಕೂ ಅಧಿಕ ಗಣವೇಷಧಾರಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಇಲ್ಲಿನ ಪದವಿ ಪೂರ್ವ ಕಾಲೇಜು ಮೈದಾನದಿಂದ ಅಂಚೆಕಚೇರಿ, ಗಡಿಯಾರ ಸರ್ಕಲ್, ಹನುಮಾನ್ ಸರ್ಕಲ್, ಗದ್ದೆಮ್ಮ ದೇವಿ ಗುಡಿ, ನಗರೇಶ್ವರ ದೇವಸ್ಥಾನ, ಪಿಂಚಣಿಪುರ, ರಾಘವೇಂದ್ರ ದೇವಸ್ಥಾನ, ಬಸ್ ನಿಲ್ದಾಣ ಸರ್ಕಲ್, ಬೈಪಾಸ್ ರಸ್ತೆ, ಸ್ವಾಮಿ ವಿವೇಕಾನಂದ ನಗರ ಮೂಲಕ ಪಥ ಸಂಚಲನ ನಡೆಯಿತು.
ಪ್ರಮುಖ ರಸ್ತೆಗಳಲ್ಲಿ ರಂಗೋಲಿ ಬಿಡಿಸಿದ ಮಹಿಳೆಯರು, ಗಣವೇಷಧಾರಿಗಳು ಬರುತ್ತಿದ್ದಂತೆ ಹೂ ಮಳೆಗೆರೆದು ಸ್ವಾಗತಿಸಿದರು. ಮಕ್ಕಳು ಗಣವೇಷಧಾರಿಗಳಾಗಿ ಹಾಗೂ ಛತ್ರಪತಿ ಶಿವಾಜಿ, ನೇತಾಜಿ ಸುಭಾಶ್ಚಂದ್ರ ಬೋಸ್, ಭಗತ್ ಸಿಂಗ್, ಕಿತ್ತೂರು ರಾಣಿ ಚನ್ನಮ್ಮ ಸೇರಿದಂತೆ ಮಹನೀಯರ ವೇಷಭೂಷಣ ತೊಟ್ಟು ಗಮನ ಸೆಳೆದರು.
ಶಾಸಕ ಮಾನಪ್ಪ ವಜ್ಜಲ್, ಗಿರಿಮಲ್ಲನಗೌಡ, ವೀರನಗೌಡ ಲೆಕ್ಕಿಹಾಳ, ಹುಲ್ಲೇಶ ಸಾಹುಕಾರ, ಕೆ.ನಾಗಭೂಷಣ, ಪಾಂಡುರಂಗ ಆಪ್ಟೆ ಗಣವೇಷಧಾರಿಗಳಾಗಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.