ಭವ್ಯ ಭಾರತ ನಿರ್ಮಾಣದ ಕನಸು

15nrp 1...
Published on

ಎನ್.ಆರ್.ಪುರ: ಡಾ.ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮುನ್ನ ಮುಂದಿನ 100 ವರ್ಷ ಭಾರತ ಹೇಗಿರಬೇಕು ಎಂಬ ಚಿಂತನೆ ಮಾಡಿದ್ದರು ಎಂದು ಮೈಸೂರಿನ ಎಟಿಐ ಆಡಳಿತ ತರಬೇತಿ ಸಂಸ್ಥೆ ಉಪನ್ಯಾಸಕ ಡಾ.ಅಬ್ದುಲ್ ವಹಾಬ್ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನ ರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಡಾ.ಅಂಬೇಡ್ಕರ್ ಅವರು ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ರಚಿಸಿದ್ದರು. ಡಾ.ಬಾಬು ಜಗಜೀವನ ರಾಂ ಅವರು ಸಂವಿಧಾನವನ್ನು ಕಾರ್ಯಗತಗೊಳಿಸಿದ್ದರು. ಇಬ್ಬರು ದೇಶದ ಸ್ವಾಭಿಮಾನದ ಸಂಕೇತವಾಗಿದ್ದಾರೆ ಎಂದರು.

1956ರ ಡಿಸೆಂಬರ್ 6 ರಂದು ಡಾ.ಅಂಬೇಡ್ಕರ್ ನಿಧನರಾದಾಗ ಜಗತ್ತಿನ 148 ರಾಷ್ಟ್ರಗಳು ತಮ್ಮ ದೇಶದ ಧ್ವಜವನ್ನು ಕೆಳಗೆ ಇಳಿಸಿ ಗೌರವ ಸಲ್ಲಿಸಿದ್ದರು. ಹಸಿರುಕ್ರಾಂತಿ ನೇಕಾರರಾದ ಬಾಬು ಜಗಜೀವನ ರಾಂ ಅವರು ಸಮಾಜ ಕಲ್ಯಾಣ ಇಲಾಖೆ ಹುಟ್ಟು ಹಾಕಿ ದಲಿತರಿಗೆ, ಹಿಂದುಳಿದವರಿಗೆ ಸರ್ಕಾರದಿಂದ ಸವಲತ್ತುಗಳನ್ನು ತಲುಪಿಸಿದ್ದರು. ಅವರು ತಮ್ಮ ಜೀವಿತ ಅವಧಿಯಲ್ಲಿ ಒಮ್ಮೆಯೂ ಚುನಾವಣೆಯಲ್ಲಿ ಸೋತಿರಲಿಲ್ಲ ಎಂದರು.

ತಹಸೀಲ್ದಾರ್ ತನುಜ.ಟಿ.ಸವದತ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎ.ಕೆ.ಪಾಟೀಲ್, ಪಪಂ ಉಪಾಧ್ಯಕ್ಷೆ ಉಮಾ ಕೇಶವ, ಸದಸ್ಯರಾದ ಮುಕಂದ, ಸುರೈಯಾ ಭಾನು, ಕೆ.ವಿ.ಸಾಜು, ಇ.ಸಿ.ಜೋಯಿ, ಕೆ.ಎಂ.ಶಿವಣ್ಣ, ಡಿ.ರಾಮು, ವಾಲ್ಮೀಕಿ ಶ್ರೀನಿವಾಸ್, ಮಂಜುನಾಥ್, ಸಿಪಿಐ ಗುರುದತ್‌ಕಾಮತ್, ಪಿಎಸ್‌ಐ ನಿರಂಜನಗೌಡ, ನಿರಂಜನ ಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net