ಡ್ರೀಮ್ 11 ಗೇಮ್ ಆಡಿ ಹಣ ಸೋತು ಆತ್ಮಹತ್ಯೆ

Crime Logo
Published on

ಕಲಬುರಗಿ: ಡ್ರೀಮ್ ೧೧ ಆನ್‌ಲೈನ್ ಗೇಮ ವ್ಯಸನಕ್ಕೆ ಒಳಗಾಗಿದ್ದ ವ್ಯಕ್ತಿ ಸಾಲಕ್ಕೆ ಒಳಗಾಗಿ, ಮಾನಸಿಕ ರೋಗಿಯಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸಿದ್ದರಾಮೇಶ್ವರ ಕಾಲನಿಯಲ್ಲಿ ನಡೆದಿದೆ. ನಗರದಲ್ಲಿ ಖಾನಾವಳಿಯಲ್ಲಿ ಕೆಲಸ ಮಾಡುತ್ತಿದ್ದ ಅಕ್ಕಲಕೋಟ ತಾಲೂಕಿನ ಜೇವೂರ ಗ್ರಾಮದ ಸಾಗರ ಚವ್ಹಾಣ್ ಆತ್ಮಹತ್ಯೆಗೆ ಒಳಗಾದವ.

ಕಳೆದ ಒಂದು ತಿಂಗಳಿAದ ಮೊಬೈಲ್‌ನಲ್ಲಿ ಡ್ರೀಮ್ ೧೧ ಗೇಮ್ ಆಡುತ್ತಿದ್ದು, ಮಾನಸಿಕ ಅಸ್ವಸ್ಥನಾಗಿದ್ದ. ಕೆಲ ದಿನಗಳ ಹಿಂದೆ ಮನೋರೋಗ ತಜ್ಞರಿಗೆ ತೋರಿಸಲಾಗಿದೆ. ಆದರೂ ಗೇಮ್ ಆಡುವುದು ಬಿಟ್ಟಿರಲಿಲ್ಲ. ಆನ್‌ಲೈನ್ ಗೇಮ್‌ನಲ್ಲಿ ಹಣ ಸೋತಿರುವುದಾಗಿ ಪತ್ನಿಗೆ ಸಾಗರ ಹೇಳಿದ್ದ. ಈ ಮಧ್ಯೆ ಮೃತನ ಸಹೋದರರು ಆತನ ಮೊಬೈಲ್‌ನಲ್ಲಿನ ಡ್ರೀಮ್ ೧೧ ಆ್ಯಪ್ ಡಿಲಿಟ್ ಮಾಡಿ, ಬುದ್ಧಿವಾದ ಹೇಳಿದ್ದರು. ಕುಟುಂಬಸ್ಥರೆಲ್ಲರೂ ಕೆಲಸಕ್ಕೆ ಹೋಗಿದ್ದಾಗ ಜ.೭ರಂದು ಕೋಣೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾನೆ. ತಕ್ಷಣ ಪಕ್ಕದ ಮನೆಯವರು ದೇಹ ಕೆಳಗಿಸಿ, ಆಸ್ಪತ್ರೆಗೆ ಕೊಂಡ್ಯೊಯ್ದಿದ್ದು, ಮೃತಪಟ್ಟಿದ್ದ. ಸಾಗರ ಡ್ರಿಮ್ ೧೧ ಆಟವಾಡಿ ಹಣ ಸೋತು, ಮಾನಸಿಕ ಅಸ್ವಸ್ಥನಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಾಯಿ ಕಮಲಾಬಾಯಿ ನೀಡಿದ ದೂರಿನಂತೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net