ಪ್ರಕೃತಿಯ ಕೊಡುಗೆ ದುರ್ಬಳಕೆ ಮನುಷ್ಯನಿಗೆ ಮಾರಕ

27 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರಕೃತಿ ಪ್ರತಿಯೊಂದು ಜೀವಿಗೂ ಅಪಾರ ಕೊಡುಗೆ ನೀಡಿದೆ. ಅದರ ಸದುಪಯೋಗಪಡಿಸಿಕೊಳ್ಳದ ಮಾನವ ಇಂದು ತನ್ನನ್ನೇ ಅಧೋಗತಿಗೆ ತಳ್ಳಿಕೊಳ್ಳುತ್ತಿದ್ದಾನೆ. ಪ್ಲಾಸ್ಟಿಕ್ ಮತ್ತು ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ ಹೇಳಿದರು.

ನಗರದ ಪರಿಸರ ಭವನದಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ಮಹಿಳಾ ಮಂಡಲದ ಸದಸ್ಯರಿಗಾಗಿ ಪರಿಸರ ಗೀತೆ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ದಿನನಿತ್ಯದ ಜೀವನಕ್ಕಾಗಿ ಕಾಡುಗಳು ನಾಶವಾಗುತ್ತವೆ. ಮನುಷ್ಯನ ದುರಾಸೆಗೆ ಪ್ರಕೃತಿ ತನ್ನ ಸಮತೋಲನ ಕಳೆದುಕೊಳ್ಳುತ್ತಿದೆ. ಇದರಿಂದ ಆಗಾಗ ಸುನಾಮಿ, ಭೂಕಂಪಗಳ0ಥ ದುರ್ಘಟನೆಯನ್ನು ಕಾಣುತ್ತಿದ್ದೇವೆ. ಪ್ರಕೃತಿಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಹೊಣೆಗಾರರಾಗಿರಬೇಕು ಎಂದು ಎಂದರು.

ಸಾಮೂಹಿಕ ಪರಿಸರ ಗೀತೆಗಳ ಸ್ಪರ್ಧೆಯಲ್ಲಿ ಶ್ರೀ ರಂಜನ್ ಮಹಿಳಾ ಮಂಡಳ ಧಾರವಾಡ ಪ್ರಥಮ ಸ್ಥಾನ, ಗಾನ ಸಿಂಚನ ಮಹಿಳಾ ಮಂಡಳ ಧಾರವಾಡ ದ್ವಿತೀಯ ಸ್ಥಾನ, ಭೂಮಿಕಾ ಮಹಿಳಾ ತಂಡ ಧಾರವಾಡ ತೃತೀಯ ಸ್ಥಾನ ಪಡೆದರು.

ಶಂಕರ ಕುಂಬಿ ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀಧರ ಕುಲಕರ್ಣಿ ಪರಿಸರ ಗೀತೆ ಹಾಡಿದರು. ಪರಿಸರ ಅಽಕಾರಿ ಲಲಿತಾ ದೊಡಮನಿ, ಶಿಕ್ಷಣಾಽಕಾರಿ ರೇಣುಕಾ ಅಮಲ್ಜರಿ, ಕೆ.ಎಚ್. ನಾಯಕ, ಗೀತಾ ಕುಂಬಿ, ಶಶಿಧರ ಕೊಡಿಹಳ್ಳಿ, ಬೀರಪ್ಪ ಕುದರಿಹಾಳ, ಇತರರಿದ್ದರು. ವಿಲಾಸ ಕುಲಕರ್ಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net