ಚಿತ್ರ ಬಿಡಿಸಿ ಬೈಸಿಕಲ್ ಗೆಲ್ಲಿ

cycling
Published on

ಮೈಸೂರು: ಮೈಸೂರು ಫೆಸ್ಟ್ ಪ್ರಯುಕ್ತ ನಮ್ಮ ಪರಂಪರೆ, ನಿಮ್ಮ ತಾಣ ವಿಷಯದಡಿ ಮೈಸೂರು ಪ್ರವಾಸೋದ್ಯಮವನ್ನು ಪ್ರತಿಬಿಂಬಿಸುವ ಚಿತ್ರಕಲಾ ಸ್ಪರ್ಧೆಯನ್ನು ಜ.27 ರಂದು ರಂದು ಮೈಸೂರು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಮುಂಭಾಗ ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಯು ಬೆಳಗ್ಗೆ 9.30 ರಿಂದ 11ರವರೆಗೆ ನಡೆಯಲಿದೆ. 8 ರಿಂದ 12ನೇ ತರಗತಿಯ ಆಸಕ್ತ ವಿದ್ಯಾರ್ಥಿಗಳು ಅರ್ಜಿಯನ್ನು ಈ ಲಿಂಕ್ ಮೂಲಕ https://forms.gle/BbWdJUzv1uFAeuXb8 ಸಲ್ಲಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂರು ಸ್ಪರ್ಧಿಗಳಿಗೆ ಬೈಸಿಕಲ್, ಟ್ರೋಫಿ ಹಾಗೂ ಪ್ರಮಾಣ ಪತ್ರ ನಿಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಮಾಹಿತಿಗೆ ಮೊ: 74115 64510 ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net