ಮಾಲೂರಿನಲ್ಲಿ ದ್ರೌಪದಿ ಜಯಂತ್ಯುತ್ಸವ ಸಂಪನ್ನ

14 maluru droupadi
Published on

ಮಾಲೂರು: ಪಟ್ಟಣದ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಹ್ನಿಕುಲ ಕ್ಷತ್ರಿಯ ಸಂಘ, ಶ್ರೀ ಧರ್ಮರಾಯಸ್ವಾಮಿ ದೇವಾಲಯ ಸಮಿತಿ ಹಾಗೂ ಮಾಲೂರು ವಹ್ನಿ ಯುವ ಜಾಗೃತಿ ಸಂಘದ ಆಶ್ರಯದಲ್ಲಿ ಬುಧವಾರ 17ನೇ ವರ್ಷದ ದ್ರೌಪದಿ ಜಯಂತ್ಯುತ್ಸವ ಅದ್ದೂರಿಯಾಗಿ ನೆರವೇರಿತು.

ಬೆಳಗ್ಗೆ ದ್ರೌಪದಿ ದೇವಿಗೆ ವಿಶೇಷ ಅಭಿಷೇಕ ನಂತರ ಹೂವಿನ ಮಂಟಪದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು. ವಿಶೇಷ ಪೂಜೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀ ದ್ರೌಪದಿ ದೇವಿ ಮಹಿಳಾ ಸಂಘದಿಂದ ಕಾರ್ಯಕ್ರಮಕ್ಕೆ ಹಾಗೂ ಪೂಜೆಗೆ ಬರುವ ಸುಮಂಗಳಿಯರಿಗೆ ಅರಿಶಿಣ, ಕುಂಕುಮ ಮತ್ತು ಮಂಗಳ ದ್ರವ್ಯ ನೀಡಲಾಯಿತು. ಭಕ್ತಾದಿಗಳು ಮನೆಗಳಿಂದ ತಂಬಿಟ್ಟು ದೀಪಗಳನ್ನು ತಂದು ಆರತಿ ಬೆಳಗಿಸಿ, ದೇವರಿಗೆ ಫಲ ತಾಂಬೂಲಗಳಿಂದ ಮಡಿಲು ತುಂಬಿಸುವ ಕಾರ್ಯಕ್ರಮ ಮಾಡಿದರು.

ಸಂಜೀವಿನಿ ಚಾರಿಟಬಲ್​ ಟ್ರಸ್ಟ್​ ಸಂಸ್ಥಾಪಕ ಅಧ್ಯಕ್ಷ ಶ್ರೀ ಹೂಡಿ ವಿಜಯ್​ ಕುಮಾರ್​ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ರೌಪದಿ ದೇವಿಗೆ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net