ನಾಟಕಗಳು ಅಳುವಿನ ಅಂಚಿನಲ್ಲಿರುವುದು ವಿಷಾದನೀಯ

Untitled design
ಹನುಮಸಾಗರದಲ್ಲಿ ಎಸ್.ಎಸ್. ಕೆ ಸಮುದಾಯದಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕವನ್ನು ನಿಸರ್ಗ ಸಂಗೀತ ಶಾಲೆಯ ಅಧ್ಯಕ್ಷ ಮಲ್ಲಯ್ಯ ಕೋಮಾರಿ ಉದ್ಘಾಟಿಸಿದರು. ಸಮುದಾಯದ ಸ್ಥಳೀಯ ಅಧ್ಯಕ್ಷ ಭಗೀರಥಸಾ ಪಾಟೀಲ್, ಮುಖಂಡರಾದ ಮಾರುತಿಸಾ ರಂಗ್ರೇಜ್, ಅಂಬಾಸಾ ರಂಗ್ರೇಜ್, ರಾಘವೇಂದ್ರಸಾ ರಾಯಬಾಗಿ ಇತರರಿದ್ದರು.
Published on

ಹನುಮಸಾಗರ: ಯುವಕರು ಉತ್ತಮ ಸಂದೇಶವಿರುವ ನಾಟಕ ಪ್ರದರ್ಶನಕ್ಕೆ ಮುಂದಾಗಬೇಕು ಎಂದು ನಿಸರ್ಗ ಸಂಗೀತ ಶಾಲೆ ಅಧ್ಯಕ್ಷ ಮಲ್ಲಯ್ಯ ಕೋಮಾರಿ ಹೇಳಿದರು.


ಪಟ್ಟಣದಲ್ಲಿ ದಸರಾ ಹಬ್ಬದ ನಿಮಿತ್ತ ಎಸ್.ಎಸ್.ಕೆ ಸಮುದಾಯದಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಸಂಧಾನ ಪೌರಾಣಿಕ ನಾಟಕದ ಉಚಿತ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿ ನಾಟಕಗಳು ಅಳುವಿನ ಅಂಚಿನಲ್ಲಿರುವುದು ವಿಷಾದನೀಯ ಸಂಗತಿಯಾಗಿದೆ. ನಾಟಕಗಳು ಗ್ರಾಮೀಣರ ಜೀವನದಲ್ಲಿ ಮಹತ್ವದ ಪಾತ್ರವಹಿಸಿದೆ. ಅಲ್ಲದೆ ಹಿಂದಿನ ಕಾಲದಲ್ಲಿ ಮನರಂಜನೆ ಕೇಂದ್ರಗಳಾಗಿದ್ದವು ಎಂದರು.


ಎಸ್.ಎಸ್. ಕೆ ಸಮುದಾಯದ ಸ್ಥಳೀಯ ಅಧ್ಯಕ್ಷ ಭಗೀರಥಸಾ ಪಾಟೀಲ, ಮುಖಂಡರಾದ ಭೀಮಸಾ ದೇವಳೆ, ರಾಜು ರಾಯಬಾಗಿ, ಸುನಿಲ ಬಸೂದೆ, ಮಂಜುನಾಥ ಪಾಟೀಲ್, ಅಶೋಕ ಮಿಸ್ಕಿನ, ಸುನಿಲ ಕಾಟವಾ, ಚಂದ್ರು ಕಾಟವಾ, ಪ್ರವೀಣ ರಂಗ್ರೇಜ್, ತುಕಾರಾಮ ದೇವಳೆ, ಆನಂದ ಪಾಟೀಲ, ಆನಂದ, ಧನು, ಭವಾನಿ ಕಾಟವಾ, ಮಂಜುನಾಥ ಪಾಟೀಲ, ಶಂಕರ ಪಾಟೀಲ, ಹನಮಂತಸಾ ರಾಯಬಾಗಿ, ಕಿರಣ ಪವಾರ, ಭವಾನಸಾ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net