ನಾಟಕಗಳು ಬದುಕಿನ ಮೌಲ್ಯ ಅಡಕ

Dramas contain the value of life
Dramas contain the value of life
Published on

ಕೆರೂರ : ನಾಟಕಗಳು ಪ್ರಸ್ತುತ ಸಮಾಜದ ಸ್ಥಿತಿಗತಿ ಹಾಗೂ ಜನರ ಬದುಕಿನ ಮೌಲ್ಯ ತಿಳಿಸುತ್ತವೆ ಎಂದು ಹಾಲು ಒಕ್ಕೂಟದ ಅಧ್ಯಕ್ಷ ಈರಣ್ಣ ಕರಿಗೌಡ್ರ ಹೇಳಿದರು.

ಪಟ್ಟಣದ ಹೊಸಪೇಟಿ ಬಡಾವಣೆಯ ಬನಶಂಕರಿದೇವಿ ಜಾತ್ರೆಯ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ‘ಧರ್ಮ ತುಂಬಿದ ಮನೆ’ ಎಂಬ ಸುಂದರ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ನಾಟಕಗಳು ನಶಿಸಿ ಹೋಗದಂತೆ ಹಿರಿಯ ಕಲಾವಿದರು ಯುವಕರನ್ನು ಪ್ರೋತ್ಸಾಹಿಸಬೇಕು ಎಂದರು.

ಜಿಪಂ ಮಾಜಿ ಸದಸ್ಯ ಡಾ.ಎಮ್.ಜಿ.ಕಿತ್ತಲಿ ಮಾತನಾಡಿ, ನಾಟಕಗಳು ಕೇವಲ ಕಲೆಯಾಗಿ ಉಳಿಯದೆ ವ್ಯಕ್ತಿಯ ಜೀವನವನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಸತ್ಯನಾರಾಯಣ ದೇವಾಂಗಮಠ, ಭರಮು ಪೂಜಾರಿ, ಸುರೇಶ ಪೂಜಾರಿ, ಪಪಂ ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಪಪಂ ಸದಸ್ಯ ಪರಶುರಾಮ ಮಲ್ಲಾಡದ, ಉಮೇಶ ತೆಗ್ಗಿ,ಪಾಂಡಪ್ಪ ಅಂಕದ, ನಾರಾಯಣ ಅಂಕದ, ಆರ್.ಬಿ.ಬಿಲ್ಲಾರ್, ಮಾಂತೇಶ ಹಟ್ಟಿ, ಎಂ.ಕೆ. ವಿಠ್ಠಪ್ಪನವರ, ಹನಮಂತ ಅಜ್ಜೋಡಿ, ದೇವರಾಜ ಚೂರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net