ನಾಟಕ ತರಬೇತಿ ಶಿಬಿರ 16ರಿಂದ

Published on

ಹುಬ್ಬಳ್ಳಿ: ಇಲ್ಲಿಯ ಅಭಿನಯ ಲೋಕ ಸಂಸ್ಥೆಯು ಒಂದೂವರೇ ತಿಂಗಳ ಉಚಿತ ನಾಟಕ ತರಬೇತಿ ಶಿಬಿರ ಏರ್ಪಡಿಸಿದೆ. ಮಾರ್ಚ್ 16ರಿಂದ ಪ್ರತಿ ಭಾನುವಾರ, ಮಂಗಳವಾರ ಮತ್ತು ಶುಕ್ರವಾರ ಸಂಜೆ 6 ರಿಂದ 8ರ ವರೆಗೆ ಶಿಬಿರವು ನಗರದ ಗೋಕುಲ ರಸ್ತೆ ಡಾ. ಕೆ.ಎಸ್. ಶರ್ಮಾ ಇನ್ ಸ್ಟಿಟ್ಯೂಟ್ ಹಾಲ್ ನಲ್ಲಿ ನಡೆಯಲಿದೆ.

20ರಿಂದ 40ವರ್ಷದ ಆಸಕ್ತ ಹವ್ಯಾಸಿ ಕಲಾವಿದರು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಕಾಲೇಜು ವಿದ್ಯಾರ್ಥಿಗಳು, ಯುವಜನರಿಗೆ ಆದ್ಯತೆ ಇದೆ.

ಶಿಬಿರದಲ್ಲಿ ನಾಟ್ಯಶಾಸ್ತ್ರ ಆಧಾರಿತ ವಿಷಯಗಳ ತರಬೇತಿ ನೀಡಲಾಗುವುದು. ಶಿಬಿರದ ಕೊನೆಯಲ್ಲಿ ಸಂಸ್ಕೃತ ಮೂಲದ ಕನ್ನಡ ಅನುವಾದದ ಒಂದು ಪೂರ್ಣ ನಾಟಕವನ್ನು ಸಿದ್ಧಪಡಿಸಿ ಪ್ರದರ್ಶಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಶಿಬಿರದ ನಿರ್ದೇಶಕ ವಿಶ್ವನಾಥ ಕುಲಕರ್ಣಿ ಅವರನ್ನು ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net