ನಾಟಕ ತರಬೇತಿ ಶಿಬಿರ  ಸಮಾರೋಪ

Published on

ಹುಬ್ಬಳ್ಳಿ: ಇಲ್ಲಿಯ ಸುನಿಧಿ ಕಲಾ ಸೌರಭ ಹಾಗೂ ರೋಟರಿ ಕ್ಲಬ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪಾಠ ನಾಟಕ ವಿದ್ಯಾರ್ಥಿನಿಯರಿಗೆ ಅಭಿನಯ ತರಬೇತಿ ಶಿಬಿರದ ಸಮಾರೋಪ ಆ. 12ರಂದು ಮಧ್ಯಾಹ್ನ 3ಕ್ಕೆ ಹಳೇಹುಬ್ಬಳ್ಳಿ ಶ್ರೀ ಜಿಹ್ವೇಶ್ವರ ಬಾಲಕಿಯರ ಶಾಲೆಯಲ್ಲಿ ಏರ್ಪಡಿಸಲಾಗಿದೆ.

ಜಿಹ್ವೇಶ್ವರ ಶಿಕ್ಷಣ ಸಮಿತಿ ಅಧ್ಯಕ್ಷ ನಾಗರಾಜ ದಿವಟೆ ಅಧ್ಯಕ್ಷತೆ ವಹಿಸುವರು. ಮಾಜಿ ರೋಟರಿ ಗವರ್ನರ್ ಬ್ಯಾಸಿಲ್ ಡಿಸೋಜಾ, ರೋಟರಿ ಕ್ಲಬ್ ಅಧ್ಯೆ ಜೋಶ್ನಾ ಕಡಕೋಳ ಭಾಗವಹಿಸುವರು. ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಉಪಸ್ಥಿತರಿರುವರು.

ಸುನಿಧಿ ಕಲಾ ಸೌರಭದ ಕಾರ್ಯದರ್ಶಿ ವೀಣಾ ಅಠವಲೆ ಅವರ ಸಂಚಾಲಕತ್ವದಲ್ಲಿ ಶಾಲೆಯಲ್ಲಿ 15 ದಿನಗಳವರೆಗೆ ತರಬೇತಿ ಶಿಬಿರ ನಡೆಯಿತು. ಭಾಗವಹಿಸಿದ್ದ ವಿದ್ಯಾರ್ಥಿನಿಯರಿಂದ ಪಂಚ ಕಥೆಗಳು ನಾಟಕ ಸಿದ್ಧಪಡಿಸಲಾಗಿದೆ. ಐಶ್ವರ್ಯ ತಾಂಬೆ ನಾಟಕ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net