ನಾಟಕ ಪ್ರದರ್ಶನಕ್ಕೆ ಲಿಮ್ಕಾ ದಾಖಲೆ

drama limca record
Published on

ಹೊಸಕೋಟೆ: ರಾಜ್ಯದ 31 ಜಿಲ್ಲೆಗಳ 31 ರಂಗಮಂದಿರದಲ್ಲಿ 31 ಕಲಾವಿದರು ರಾಜಗುರು ರಚನೆ ನಿರ್ದೇಶನದ ‘ಪ್ರೇಮ ಕಥೆ’ ನಾಟಕವನ್ನು ಏಕಕಾಲದಲ್ಲಿ ಪ್ರದರ್ಶಿಸಿದ್ದು, ಈ ಸಾಧನೆ ಲಿಮ್ಕಾ ಬುಕ್ ಆ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಯಿತು.
ಲಿಮ್ಕಾ ದಾಖಲೆಗಾಗಿಯೇ ಏಕಕಾಲದಲ್ಲಿ ಪ್ರದರ್ಶಿಸಲಾದ ನಾಟಕವನ್ನು ನಗರ ಹೊರವಲಯದ ನಿಂಬೆಕಾಯಿ ಪುರದ ಜನಪದರು ರಂಗಮಂದಿರದಲ್ಲೂ ಏರ್ಪಡಿಸಲಾಗಿತ್ತು.
ಏಕವ್ಯಕ್ತಿ ನಾಟಕ ಪ್ರದರ್ಶನದಲ್ಲಿ ಪ್ರೇಕ್ಷಕರನ್ನು ರಂಜಿಸಿ ನಟ ಭೋದನಹೊಸಹಳ್ಳಿ ನಾಗೇಶ್ ಅವರನ್ನು ಸಾಹಿತಿ ಡಾ. ಬಾಲಗುರುಮೂರ್ತಿ ಹಾಗೂ ಪಶು ಪಾಲನ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ಎನ್. ನಾರಾಯಣಸ್ವಾಮಿ ಸನ್ಮಾನಿಸಿದರು. ವೇದಿಕೆ ಅಧ್ಯಕ್ಷ ಕೆ.ವಿ.ವೆಂಕಟರಮಣಪ್ಪ ಪಾಪಣ್ಣ, ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್, ಸಿದ್ದೇಶ್ವರ ದೊಡ್ದಬನಹಳ್ಳಿ, ಚಲಪತಿ, ಮುನಿರಾಜು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net