ನಾಟಕ ಪ್ರದರ್ಶನ ಇಂದು

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪನಾ ದಿನ ನಿಮಿತ್ತ ಜು. 23ರಂದು ಸಂಜೆ 5.30ಕ್ಕೆ ಮುತ್ತಿನ ರಾಶಿ ಮಕ್ಕಳ ನಾಟಕ ಪ್ರದರ್ಶನ, ಸುಗಮ ಸಂಗೀತ, ಶಿಕ್ಷಣ ಸಂಸ್ಥೆ ಸ್ಮರಣೆ, ಹಿರಿಯ ಸದಸ್ಯರಿಗೆ ಗೌರವ ಸಮರ್ಪಣೆಯನ್ನು ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಅತಿಥಿಗಳಾಗಿ ಉಪ ಮೇಯರ್​ ದುರ್ಗಮ್ಮ ಬಿಜವಾಡ ಆಗಮಿಸುವರು. ಸಂಘದ ಗೌರವ ಉಪಾಧ್ಯಕ್ಷ ಪಂ. ಎಂ. ವೆಂಕಟೇಶಕುಮಾರ ಅಧ್ಯಕ್ಷತೆ ವಹಿಸುವರು. ಶಿಕ್ಷಣ ಸಂಸ್ಥೆ ಸ್ಮರಣೆಯಲ್ಲಿ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಕುರಿತು ಹಿರಿಯ ವಕೀಲ ಚಂದ್ರಕಾಂತ ಮಟ್ಟಿ ಮಾತನಾಡುವರು. ರಂಗ ಸಾಮ್ರಾಟ ತಂಡದಿಂದ ಶೃತಿ ಹುರಳಿಕೊಪ್ಪ ನಿರ್ದೇಶನದ ಮುತ್ತಿನ ರಾಶಿ ಮಕ್ಕಳ ನಾಟಕ ಪ್ರದರ್ಶನವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net