ನಾಟಕ ಪ್ರದರ್ಶನ, ವಿಚಾರ ಸಂಕಿರಣ 21ರಿಂದ

18 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮುದಾಯ ಧಾರವಾಡ ಸಂಘಟನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅ. 21, 22ರಂದು ನಗರದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಾಟಕ ಪ್ರದರ್ಶನ, ಸಾಧಕರಿಗೆ ಸನ್ಮಾನ ಹಾಗೂ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಮುದಾಯ ಅಧ್ಯಕ್ಷ ಬಿ.ಐ. ಈಳಿಗೇರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 21ರಂದು ಸಂಜೆ 5.30ಕ್ಕೆ ನಟ ಡಾ. ಸಂಗಮೇಶ ಉಪಾಸೆ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಮನೋಜ ವಾಮಂಜೂರ ಆಗಮಿಸಲಿದ್ದಾರೆ. ಬಿ.ಐ. ಈಳಿಗೇರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಂಕರ ಹಲಗತ್ತಿ, ಎಸ್​.ಎಸ್​. ಚಿಕ್ಕಮಠ, ಡಾ. ಎಚ್​.ಎ. ಪಾರ್ಶ್ವನಾಥ, ಎನ್​.ಎಂ. ಪಾಟೀಲ ಅವರಿಗೆ ಸನ್ಮಾನಿಸಲಾಗುವುದು. ನಂತರ ಹೂವಿನಹಡಗಲಿ ರಂಗ ಭಾರತಿ ತಂಡದಿಂದ ಪಿ. ಲಂಕೇಶ ರಚನೆ, ಅಜಯ ಚ. ನಿರ್ದೇಶನದ ತೆರೆಗಳು ನಾಟಕ ಪ್ರದರ್ಶನವಾಗಲಿದೆ ಎಂದರು.
ಅ. 22ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕಲೆಗಾಗಿ ಕಲೆಯಲ್ಲ ಬದುಕಿಗಾಗಿ ಕಲೆ ಕುರಿತು ಡಾ. ರಂಜಾನ್​ ದರ್ಗಾ ವಿಷಯ ಮಂಡಿಸುವರು. ಚರ್ಚೆಯಲ್ಲಿ ಬಿ.ಎಸ್​. ಸೊಪ್ಪಿನ, ಸಿ.ಎಸ್​. ಪಾಟೀಲಕುಲಕರ್ಣಿ, ಬಿ.ಎನ್​. ಪೂಜಾರಿ, ಭೀಮನಗೌಡ ಕಠಾವಿ, ಇತರರು ಪಾಲ್ಗೊಳ್ಳಲಿದ್ದಾರೆ. ಡಾ. ಶಿವಾನಂದ ಶೆಟ್ಟರ್​ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಭೀಮಸೇನ ಕಾಗಿ, ಡಾ. ಶಿವಾನಂದ ಶೆಟ್ಟರ್​, ಎನ್​.ಎಂ. ಪಾಟೀಲ, ಗಂಗಾಧರ ಗಾಡದ, ಅನ್ನಪೂರ್ಣ ಮಡಿವಾಳರ, ಈರಣ್ಣ ಐನಾಪುರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net