ನಾಟಕ ಪ್ರದರ್ಶನ 25ರಂದು

18 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ನೇಹಿತರು ಕಲಾ ಸಂಘ , ಮೈಸೂರಿನ ಸಂಕಲ್ಪ ಸಂಸ್ಥೆ ವತಿಯಿಂದ ಅ. 25ರಂದು ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಂತ ಕಾಯ್ಕಿಣಿ ಅನುವಾದಿಸಿದ, ಹುಲುಗಪ್ಪ ಕಟ್ಟಿಮನಿ ನಿರ್ದೇಶನದ "ಜತೆಗಿರುವನು ಚಂದಿರ' ನಾಟಕವನ್ನು ಸಂಕಲ್ಪ ತಂಡದ ಸದಸ್ಯರು ಪ್ರದರ್ಶಿಸಲಿದ್ದಾರೆ. ಸಾಫ್ಟವೇರ್ ಉದ್ಯೋಗಿಗಳು ಈ ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿರುವುದು ವಿಶೇಷ ಎಂದರು.
ನಾಟಕದಲ್ಲಿ ಆಸಕ್ತಿ ಹೊಂದಿರುವ ಸಾಫ್ಟವೇರ್​ ಉದ್ಯೋಗಿಗಳಿಗೆ ಸುಮಾರು 3 ತಿಂಗಳ ಕಾಲ ತರಬೇತಿ ನೀಡಲಾಗಿದೆ. ಬಳಿಕ ಕೊಪ್ಪಳ, ಮೈಸೂರು, ತೀರ್ಥಹಳ್ಳಿ, ಬೆಂಗಳೂರು ಸೇರಿ ಇತರ ಕಡೆಗಳಲ್ಲಿ ಒಟ್ಟು 13 ಪ್ರದರ್ಶನಗಳನ್ನು ಕಂಡಿದೆ. ಇದೀಗ 14ನೇ ಪ್ರದರ್ಶನ ಧಾರವಾಡದಲ್ಲಿ ಆಯೋಜಿಸಲಾಗಿದೆ ಎಂದರು.
ಕೇವಲ ರಂಗಾಯಣಗಳಿಗೆ ಮಾತ್ರವಲ್ಲ, ಬಹುತೇಕ ಇಲಾಖೆಗಳಿಗೆ ಅನುದಾನ ನೀಡುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ. ಎಲ್ಲ ರಂಗಾಯಣಗಳ ನಿರ್ದೇಶಕರು ಮಾತುಕತೆ ನಡೆಸಿ ಸರ್ಕಾರದಿಂದ ಅನುದಾನ ಪಡೆಯಬೇಕು. ಇಲ್ಲವಾದಲ್ಲಿ ಉತ್ತಮ ಯೋಜನೆಗಳನ್ನು ರೂಪಿಸುವುದು ಕಷ್ಟಕರವಾಗಲಿದೆ ಎಂದರು.
ಡಾ. ಪ್ರಕಾಶ ಗರುಡ, ರವಿ ಕುಲಕರ್ಣಿ, ವಿಜಯೇಂದ್ರ ಅರ್ಚಕ, ಪ್ರೊ. ಶಶಿಧರ ತೋಡಕರ, ಸಂತೋಷ ಮಹಾಲೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net