ಫೆ.17 ರಂದು ಅಳಿದ ಮೇಲೆ ನಾಟಕ ಪ್ರದರ್ಶನ

Drama-games
Published on

ಮೈಸೂರು: ಕಲಾಸುರುಚಿ ಕಲಾಸಂಸ್ಥೆಯ ಆಶ್ರಯದಲ್ಲಿ ಡಾ.ಶಿವರಾಮ ಕಾರಂತ ಅವರ ಕಾದಂಬರಿ ಆಧಾರಿತ, ಶಶಿಧರ ಡೋಂಗ್ರೆ ಅವರು ರೂಪಾಂತರಿಸಿದ ‘ಅಳಿದ ಮೇಲೆ’ ನಾಟಕ ಪ್ರದರ್ಶನವನ್ನು ಫೆ.17 ರಂದು ಸಂಜೆ 6.30ಕ್ಕೆ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಶಿವರಾಮಕಾರಂತರ ವಿಶಿಷ್ಟ ಕೃತಿ ಅಳಿದ ಮೇಲೆ. ಅವರ ಅಧ್ಯಯನ, ಚಿಂತನೆ, ರಚನಾ ಸಾಮರ್ಥ್ಯಕ್ಕೆ ಒಳ್ಳೆಯ ನಿದರ್ಶನ ಈ ಕಾದಂಬರಿಯು ಆಗಿದೆ. ವಿಮರ್ಶಕರ ಮೆಚ್ಚುಗೆ ಪಡೆದ ಅಪೂರ್ವ ಕಾದಂಬರಿ ಅಳಿದ ಮೇಲೆ, ಒಂದರ್ಥದಲ್ಲಿ ಬದುಕಿನ ಶೋಧ. ಅರ್ಥವಾಗದ ನಿಗೂಢಗಳ, ಭಾವನಾತ್ಮಕ ಸಂಬಂಧಗಳ ತುಲನೆಯೂ ಹೌದು.

ಒಟ್ಟಾರೆ ಬದುಕಿನ ವಿಶ್ಲೇಷಣೆಯಂತಿರುವ ಈ ಕಥೆ ತಾತ್ವಿಕ ಚರ್ಚೆಯಾಗಿದೆ. ಕಾರಂತರ ಬೆಟ್ಟದ ಜೀವದಂತೆ ಆಪ್ತ ಗುಣವನ್ನು ಹೊಂದಿದೆ. ಈ ಮೂಲಕ ಕಾರಂತರನ್ನು ಓದುವ ಹಂಬಲವೊಂದನ್ನು ಹುಟ್ಟು ಹಾಕುವ ಆಶಯ ನಮ್ಮದು. ಜತೆಗೆ ಕಾಲ ಕಾಲಕ್ಕೆ ಲೇಖಕನೊಬ್ಬನ ಮರುಚಿಂತನೆಯಾದರೆ ಹೊಸ ಹೊಸ ಚಿಂತನೆಗಳು ಹುಟ್ಟು ಬಹುದೆಂಬ ಆಸೆಯೂ ಇದೆ. ಈ ನಿಟ್ಟಿನಲ್ಲಿ ಆಳಿದ ಮೇಲೆ ನಾಟಕ ಪ್ರದರ್ಶಿತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net