

ಮಂಡ್ಯ: ನಾಟಕದ ವೇಳೆ ಪಾತ್ರಧಾರಿ ಮೇಲೆ ಚಾಮುಂಡಿ ದೇವಿಯ ಆಹ್ವಾಹನೆ ಆಗಿದೆ ಎನ್ನಲಾದ ದೃಶ್ಯ ವೈರಲ್ ಆಗಿದೆ.
ಮಂಡ್ಯದ ಕಲಾಮಂದಿರದಲ್ಲಿ ಫೆ.6ರಂದು ನಾಟಕ ಪ್ರದರ್ಶನ ನಡೆಯುತ್ತಿತ್ತು. ರಾಕ್ಷಸ ಸಂಸಾರ ಸನ್ನಿವೇಶದ ವೇಳೆ ಚಾಮುಂಡಿ ದೇವಿ ಪಾತ್ರಧಾರಿ ಇದು ನಾಟಕ ಎಂಬುದನ್ನೂ ಮರೆತು ನಿಜವಾಗಿಯೂ ವಧೆಗೆ ಮುಂದಾದರು. ಆ ವ್ಯಕ್ತಿ ಮೇಲೆ ಸಾಕ್ಷಾತ್ ಚಾಮುಂಡಿ ತಾಯಿ ಆಹ್ವಾಹನೆ ಆಗಿತ್ತು ಎನ್ನಲಾಗಿದೆ. ಇದನ್ನೂ ಓದಿರಿ ರಾಜ್ಯದಲ್ಲಿ ಈ ಭಾರಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!
ಪ್ರತೀ ಬಾರಿ ಈ ನಾಟಕ ನಡೆದಾಗಲೆಲ್ಲಾ ಚಾಮುಂಡಿ ಪಾತ್ರಧಾರಿ ಮೇಲೆ ತಾಯಿಯ ಆಹ್ವಾಹನೆ ಆಗುತ್ತೆಂಬ ನಂಬಿಕೆ ಇದೆ. ಈ ಭಾರಿಯೂ ಕೌಂಡಲಿಕನ ವಧೆ ಮಾಡುವ ಸನ್ನಿವೇಶದ ವೇಳೆ ಚಾಮುಂಡೇಶ್ವರಿ ದೇವಿಯ ಪಾತ್ರಧಾರಿ ಮೇಲೆ ದೇವಿ ಆಹ್ವಾಹನೆ ಆಗಿತ್ತು. ಕೌಂಡಲಿಕನ ಪಾತ್ರಧಾರಿಯನ್ನು ನಿಜವಾಗಿ ಕೊಲ್ಲಲು ಮುಂದಾದಗಿದ್ದರು. ಇದನ್ನರಿತ ನಾಟಕ ಆಯೋಜಕರು, ಯಾವುದೇ ಕೆಟ್ಟ ಘಟನೆ ಸಂಭವಿಸಬಾರದು ಎಂಬ ಉದ್ದೇಶಕ್ಕೆ ಚಾಮುಂಡಿ ಪಾತ್ರಧಾರಿಯನ್ನು ಹಿಡಿದುಕೊಂಡು ಹೊರಗೆ ಕರೆದೊಯ್ದಿದ್ದಾರೆ. ಈ ಸಂದರ್ಭದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. (ಈ ದೃಶ್ಯಕ್ಕಾಗಿ ಕೆಳಗೆ ಕೊಟ್ಟಿರುವ ವಿಜಯವಾಣಿ ಫೇಸ್ಬುಕ್ ಲಿಂಕ್ ಅನ್ನು ಕ್ಲಿಕ್ ಮಾಡಿ)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ