ಸಮಾಜದ ಡೊಂಕು ತಿದ್ದಲು ನಾಟಕ ಸಹಕಾರಿ

22sdp4a NATAK
Published on

ಸಿದ್ದಾಪುರ: ಲೋಪದೋಷಗಳನ್ನು ಬಿಂಬಿಸಿ ಸಮಾಜವನ್ನು ಸನ್ನಡತೆಯತ್ತ ಕೊಂಡೊಯ್ಯಲು ನಾಟಕಗಳು ಹೆಚ್ಚು ಸಹಕಾರಿಯಾಗಿವೆ ಎಂದು ಹಿರಿಯ ವಕೀಲ ಎ.ಪಿ. ಭಟ್ಟ ಮುತ್ತಿಗೆ ಅಭಿಪ್ರಾಯಪಟ್ಟರು.

ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ಸಿದ್ದಾಪುರದ ರಂಗಸೌಗಂಧ ತಂಡದಿಂದ ರಂಗ ಸಂಚಾರ 2023-24ರ ಅಂಗವಾಗಿ ಸೋಮವಾರ ಆಯೋಜಿಸಿದ್ದ ‘36 ಅಲ್ಲ 63’ ಎಂಬ ಹವಿಗನ್ನಡ ನಾಟಕ ಪ್ರದರ್ಶನದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದಿನ ಜೀವನದ ಪದ್ಧತಿ, ಸಂಸ್ಕೃತಿಯನ್ನು ತಿಳಿದುಕೊಳ್ಳಲು ಇಂದಿನ ಯುವಜನತೆ ನಾಟಕಗಳನ್ನು ನೋಡುವುದು ತೀರಾ ಅತ್ಯವಶ್ಯವಾಗಿದೆ ಎಂದರು.

ಇಟಗಿ ರಾಮೇಶ್ವರ ದೇವಾಲಯದ ಮೊಕ್ತೇಸರ ಚಂದ್ರಶೇಖರ ಎಂ. ಹೆಗಡೆ ಕೊಡ್ತಗಣಿ, ಭುವನಗಿರಿ ಭುವನೇಶ್ವರಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ಮಾತನಾಡಿದರು. ನಂತರ ಎನ್​ಎಸ್​ರಾವ್ ಮೂಲ ರಚನೆಯ ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ ‘36 ಅಲ್ಲ 63’ ಹವಿಗನ್ನಡ ನಾಟಕಕ್ಕೆ ಶ್ರೀಪಾದ ಹೆಗಡೆ ಕೋಡನಮನೆ ವಿನ್ಯಾಸ ನೀಡಿರುವ ರಾಜೇಂದ್ರ ಕೊಳಗಿ ಸಂಗೀತ ನಿರ್ದೇಶನ ಹಾಗೂ ಸಂಗೀತ ನಿರ್ವಹಣೆ ನಾಗರಾಜ ಜೋಗಿ ಹಾಗೂ ಜಯರಾಮ ಭಟ್ಟ ಹೆಗ್ಗಾರಳ್ಳಿ ಸಂಗೀತ ನಿರ್ವಹಣೆ ಮಾಡಿದ್ದರು. ರಂಗದಲ್ಲಿ ಗಣಪತಿ ಹೆಗಡೆ ಗುಂಜಗೋಡ, ಅಜೀತ್ ಭಟ್ಟ ಹೆಗ್ಗಾರಳ್ಳಿ, ನಾಗಪತಿ ಭಟ್ಟ ವಡ್ಡಿನಗದ್ದೆ, ಶ್ರೀಪಾದ ಹೆಗಡೆ ಕೋಡನಮನೆ ಹಾಗೂ ಪ್ರವೀಣಾ ಹೆಗಡೆ ಗುಂಜಗೋಡ ಅವರು ಉತ್ತಮವಾಗಿ ಪಾತ್ರನಿರ್ವಹಿಸಿ ಮೆಚ್ಚುಗೆ ಗಳಿಸಿದರು.

ಗಣಪತಿ ಹೆಗಡೆ ಹುಲಿಮನೆ, ಗಣಪತಿ ಹೆಗಡೆ ಗುಂಜಗೋಡು ಹಾಗೂ ರಾಮು ಅಂಕೋಲೆಕರ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net