ಅಮರ ಮಧುರ ಪ್ರೇಮ ಹಾಸ್ಯ ನಾಟಕ, ಹುಬ್ಬಳ್ಳಿಯಲ್ಲಿ ಪ್ರದರ್ಶನ ಏ. 27ರಂದು

IMG-20250423-WA0011.jpg
Published on

ಹುಬ್ಬಳ್ಳಿ: ವಯಸ್ಸು ಎಷ್ಟೇ ಆಗಲಿ ಮಾನವನಿಗೆ ಸಂಗಾತಿ ಬೇಕೇ ಬೇಕು. ಅದರಲ್ಲೂ ತಾನು ಪ್ರೀತಿಸುವ ಸಂಗಾತಿಗಾಗಿ ಏನೂ ಬೇಕಾದರೂ ಮಾಡುತ್ತಾನೆ, ತನ್ನ ಪ್ರೀತಿಯನ್ನು ಪಡೆಯಲು ಹರಸಾಹಸ ಪಡುತ್ತಾನೆ. ಇದು ಡಾ. ಯಶವಂತ ಸರದೇಶಪಾಂಡೆ ಅವರ ಹೊಸ ಹಾಸ್ಯ "ಅಮರ ಮಧುರ ಪ್ರೇಮ' ನಾಟಕದ ಕಥಾವಸ್ತು.

ಮೂಲ ಮರಾಠಿಯಲ್ಲಿ "ಸ್ಥಳ ಆಲೇ ಧಾವೂನ' ಎಂಬ ಶೀಷಿರ್ಕೆಯಡಿಯಲ್ಲಿ, ನಾಟಕಕಾರ ಹೇಮಂತ ಎದಲಾಬಾದಕರ ರಚಿಸಿದ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ, ರಂಗಕ್ಕೆ ನಿರ್ದೇಶಿಸಿ ನಾಟಕದಲ್ಲಿ ಅಮರ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಯಶವಂತ ಸರದೇಶಪಾಂಡೆ ಅವರ ಸಹಜ ಅಭಿನಯ ಮತ್ತು ಮಾತುಗಾರಿಕೆ ಬಹಳ ಚಂದ. ಇತ್ತೀಚೆಗೆ ಧಾರವಾಡ ಸೃಜನಾ ರಂಗಮಂದಿರದಲ್ಲಿ ಪ್ರದಶಿರ್ತವಾದ ಈ ನಾಟಕವನ್ನು ಧಾರವಾಡ ರಂಗಪ್ರೇಮಿಗಳು ಮನತುಂಬಿ ಕೊಂಡಾಡಿದರು.

ರಂಗದ ಮೇಲೆ ಕಾಣಿಸಿಕೊಂಡ ಮೂರು ಪಾತ್ರಗಳು ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದಂತೆ ಅಭಿನಯಿಸಿ ಹೊಸ ಹಾಸ್ಯ "ಅಮರ ಮಧುರ ಪ್ರೇಮ' ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿದರು.

ಕನ್ನಡ ರಂಗಭೂಮಿ, ಟಿವಿ ಹಾಗೂ ಸಿನೇಮಾ ಕ್ಷೇತ್ರದಲ್ಲಿ ವಿಶಿಷ್ಟ ಕಲಾದಂಪತಿಗಳು ಎಂದು ಹೆಸರು ಮಾಡಿದ ವೀಣಾ ಸುಂದರ ಮತ್ತು ಸುಂದರ ವೀಣಾ ಅವರು ಮಧುರಾ ಕಾಮತ ಹಾಗೂ ಪ್ರೇಮಸ್ವರೂಪರ ಪಾತ್ರದಲ್ಲಿ ನಾಟಕಕಾರರ ಸಂಭಾಷಣೆಗೆ ಜೀವತುಂಬಿದರು.

ನಟ ಸುಂದರ ವೀಣಾ ಅವರ ಸ್ಪಷ್ಟ ಮಾತುಗಳು, ಭಾವಾಭಿನಯ ಪ್ರೇಕ್ಷಕನಿಗೆ ಪ್ರಿಯ ಅನಿಸಿದರೆ. ನಟಿ ವೀಣಾ ಸುಂದರ ಅವರ ಅಭಿನಯ ಸಹಜ ಮತ್ತು ಸುಂದರವಾಗಿದೆ. ಇವರೀರ್ವರ ಮನಮುಟ್ಟುವ ಅಭಿನಯವನ್ನು ರಂಗದ ಮೇಲೆ ನೋಡಿ ಆನಂದಿಸಿದ ಧಾರವಾಡ ನಾಟಕ ಪ್ರಿಯರು ನಾಟಕದ ನಂತರ ಅವರನ್ನು ಕಂಡು ಮಾತಾಡಿಸಿ ತಮ್ಮ ಮೆಚ್ಚಿಗೆ ಸೂಚಿಸಿದರು.

ಭಾನುವಾರ ಏಪ್ರಿಲ್ 27ರಂದು ಸಂಜೆ 6.30ಕ್ಕೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಪ್ರದರ್ಶನ ನಡೆಯಲಿದೆ. ಹುಬ್ಬಳ್ಳಿಯ ಪ್ರದರ್ಶನವು ಗಂಗಾವತಿ ರೇಷ್ಮೇ ರಂಗೋತ್ಸವದ ಭಾಗವಾಗಿ ಜೋಶಿಸ್ ಆಸ್ಟ್ರೋಸ್ಕೊಪ್ ಪ್ರಾಯೋಜಿಸಿದ್ದು ಗಂಗಾವತಿ ಸಿಲ್ಕ್ ಪ್ಯಾಲೇಸ್ ವತಿಯಿಂದ ಅದೃಷ್ಟವಂತ ಪ್ರೇಕ್ಷಕರಿಗೆ ಸಾವಿರಾರು ಬೆಲೆಯ ಸಿಲ್ಕ್ ಸೀರೆಗಳನ್ನು ಕೊಡುಗೆ ನೀಡಲಾಗುವುದು ಎಂದು ನಿರ್ದೇಶಕ ಡಾ. ಯಶವಂತ ಸರದೇಶಪಾಂಡೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net