

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರ ಲಿಂಗರಾಜ ನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಜೀವಿ ಕಲಾ ಬಳಗವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮೂರು ದಿನಗಳ ನಾಟಕೋತ್ಸವ ಆಯೋಜಿಸಿತ್ತು.
ಸುಳ್ಳ ಮತ್ತು ಹೂಲಿ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಸಾಂಸ್ಕೃತಿಕ ಸಮುದಾಯ ಭವನದ ಅಧ್ಯಕ್ಷ ಡಾ. ಜಿ.ಬಿ. ಕಲಕೋಟಿ ಅಧ್ಯಕ್ಷತೆ ವಹಿಸಿದ್ದರು.
ತಿಪ್ಪಣ್ಣ ಮಜ್ಜಗಿ, ಆರ್.ಎಂ. ಹಿರೇಮಠ, ಎಸ್.ಎಂ. ತೊಗರ್ಸಿ, ಪ್ರೊ. ಜಿ.ಬಿ. ವಳಸಂಗ, ಡಾ. ಎಂ.ಟಿ. ಹೊಸಮನಿ, ಎಸ್.ಆರ್. ಕರಡಿ, ಸಂತೋಷ ವೆರ್ಣೇಕರ ಅತಿಥಿಗಳಾಗಿದ್ದರು. ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಡಾ. ಅಶೋಕ ಹುಗ್ಗಣ್ಣವರ, ಡಾ. ರಾಮು ಮೂಲಗಿ, ಡಾ. ಶಿವಾನಂದ ಸವಟಗಿ, ಐ.ಎಂ. ವಲ್ಲೆಪ್ಪನವರ, ಪ್ರಕಾಶ ನೂಲ್ವಿ, ರಾಧಿಕಾ ಬೇವಿನಕಟ್ಟಿ, ನಾರಾಯಣ ಭಾದ್ರಿ, ಮಂಜುನಾಥಗೌಡ, ಡಾ. ದೀಪಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.