ಮುಂಡಗೋಡದಲ್ಲಿ ಹುಬ್ಬಳ್ಳಿ ಮಕ್ಕಳ ನಾಟಕ ಪ್ರದರ್ಶನ,  ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

IMG-20250927-WA0012-1.jpg
Published on

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆ ಮುಂಡಗೋಡದ ಹಳೂರು ಓಣಿಯಲ್ಲಿರುವ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ದೇವರಗುಡಿಹಾಳ ಸರ್ಕಾರಿ ಶಾಲೆ ಮಕ್ಕಳು ನಾಟಕ ಪ್ರದರ್ಶಿಸಿ ಸೈ ಎನಿಸಿಕೊಂಡರು.

ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದೇವರ ಗುಡಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ರಸಿದ್ವ ಎಂಬ ಪೌರಾಣಿಕ ಕಿರುನಾಟಕ ಅಭಿನಯಿಸಿದರು.

ನಾಟಕವು ಮುಂಡಗೋಡ ಜನರ ಮನ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಗಂಗಾಧರ ದೊಡ್ಡವಾಡ ಹಾಗೂ ನಾಟಕದ ರೂವಾರಿ ಹುಬ್ಬಳ್ಳಿಯ ಶ್ರೀ ಜ್ಞಾನಜ್ಯೋತಿ ಕಲಾಮಂಡಳದ ತೇಜಸ್ವಿನಿ ಬೆಂಗಳೂರು ಅವರು ನಾಟಕ ಪ್ರದರ್ಶನದ ನೇತೃತ್ವ ವಹಿಸಿದ್ದರು.

ಶೆಟುವಪ್ಪ ಸವ್ವಾಸೆ, ವರದಾಶಂಕರ ಹಿರೇಮಠ, ಮಹದೇವ ವಾಲಿಕಾರ, ಹಾರ್ಮೋನಿಯಂ ಹಾಗೂ ನಾಟಕದ ನಿರ್ದೇಶಕ ಫಕ್ಕೀರೇಶ ಬಡಿಗೇರ, ಸಂತೋಷ ಬಡಿಗೇರ, ಪ್ರಸಾದನ ನೆರವೇರಿಸಿದ ಕಿರಣ ಮಹಾಲೆ, ಮುಂತಾದವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಜ್ಞಾನಜ್ಯೋತಿ ಕಲಾ ಬಳಗದ ವತಿಯಿಂದ ಜಾನಪದ ಸಂಗೀತ ಸೇವೆ ಜರುಗಿತು. ನಾಟಕದಲ್ಲಿ ಅಭಿನಯಿಸಿದ ಮಕ್ಕಳಿಗೆ ಮಾರಿಕಾಂಬಾ ಟ್ರಸ್ಟ್ ವತಿಯಿಂದ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಟ್ರಸ್ಟ್ ಚೇರ್ಮನ್ ಪಾಟೀಲ, ಕಾರ್ಯದರ್ಶಿ ಮಾರುತಿ ಓಂಕಾರ, ರಮೇಶ ರಾಮಣ್ಣವರ, ಆರ್.ಜೆ. ರಾಮದಾಸ್, ಕಮಲಾಕ್ಷಿ ರಾಣಗೆ, ಮಂಜುನಾಥ ಪಡ್ನೀಸ್, ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net