ಆ ಕಡಲ ದಾಟಿ ನಾಟಕ 25ಕ್ಕೆ

Published on

ಹುಬ್ಬಳ್ಳಿ: ಇಲ್ಲಿಯ ರಂಗರೇಖಾ ಕಲಾ ಬಳಗದ ವತಿಯಿಂದ ಬಸವರಾಜ ಚಕ್ರಸಾಲಿ ರಚನೆ, ನಿರ್ದೇಶನದ "ಆ ಕಡಲ ದಾಟಿ' ನಾಟಕ ಪ್ರದರ್ಶನ ಆ. 25ರಂದು ಸಂಜೆ 4.30ಕ್ಕೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಏರ್ಪಡಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಾಟಕದ ಉಚಿತ ಪ್ರದರ್ಶನ ಏರ್ಪಾಟಾಗಿದೆ.

ಆವಾಸ್ ನಿರ್ಮಾಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಕುರಹಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ರಂಗಭೂಮಿ ಕಲಾವಿದೆ ವೀಣಾ ಅಠವಲೆ ಅಧ್ಯಕ್ಷತೆ ವಹಿಸುವರು.

ತುಕಾರಾಮ ಕಠಾರೆ, ಬದರಿನಾರಾಯಣ ಕೊರ್ಲಹಳ್ಳಿ, ತೇಜಶ್ವಿನಿ ಹೊಸಮನಿ ಅವರು ರಂಗಗೀತೆ ಪ್ರಸ್ತುಪಡಿಸುವರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸತ ಚನ್ನಬಸಪ್ಪ ಕಾಳೆ, ರಂಗಭೂಮಿ ಕಲಾವಿದೆ ರೀಟಾ ಶಿಗ್ಗಾಂವ್ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net