ವ್ಯಕ್ತಿತ್ವ ವಿಕಸನಕ್ಕೆ ನಾಟಕ, ಕಲೆ ಪೂರಕ

nrp 3
Published on

ಎನ್.ಆರ್.ಪುರ: ಶಾಲೆಗಳಲ್ಲಿ ಯಾಂತ್ರಿಕವಾಗಿ ಶಿಕ್ಷಣ ಪಡೆಯುವ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ಸೃಜನಾತ್ಮಕ ಚಿಂತನೆಯ ನಾಟಕ, ಕಲೆ ಅಭ್ಯಾಸ ಮಾಡುವುದರಿಂದ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ಕಿರುತೆರೆ ಕಲಾವಿದ ಹಿತೇಶ್ ಕಾಫಿ ನಡ್ಕ ಹೇಳಿದರು.

ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದ ಸಭಾ ಭವನದಲ್ಲಿ 10 ದಿನಗಳ ವರ್ಣ ವೈಭವ ಚಿಣ್ಣರಮೇಳ-2025 ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳು ಮೊಬೈಲ್, ಟಿವಿ ಆಕರ್ಷಣೆಯಿಂದ ಹೊರಬಂದು ಬದುಕಿನಲ್ಲಿ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವ ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಶಿಸ್ತು ಕಲಿಯಲು ಬೇಸಿಗೆ ಶಿಬಿರ ಸಹಕಾರಿಯಾಗಲಿದೆ ಎಂದರು.

ಕಲಾವಿದ ಅಭಿನವ ಗಿರಿರಾಜ್ಗೆ ವರ್ಣಾವರಿ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಾವಿದ ಹಿತೇಶ ಕಾಫಿನಡ್ಕ, ರಂಗಭೂಮಿ ಕಲಾವಿದೆ ಅರ್ಪಿತ ಕೆನಡ್ಕ ಹಾಗೂ ಸುನೀತ ಅವರನ್ನು ಸನ್ಮಾನಿಸಲಾಯಿತು. ಪಪಂ ಅಧ್ಯಕ್ಷೆ ಜುಬೇದ, ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ, ತಾಲೂಕು ಬ್ರಾಹ್ಮಣ ಸಭಾದ ಮಾಜಿ ಅಧ್ಯಕ್ಷ ಶ್ರೀನಾಥ್, ಕಲಾವಿದ ಅಭಿನವ ಗಿರಿರಾಜ್, ರಾಗಮಯೂರಿ ಅಕಾಡೆಮಿ ನಿರ್ದೇಶಕಿ ಅಂಕಿತ ಪ್ರಜ್ವಲ್, ಪ್ರಜ್ವಲ್, ರಂಗಭೂಮಿ ಕಲಾವಿದೆ ಅರ್ಪಿತ ಕೆನಡ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net