

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ರಂಗಾಯಣವು ಪಂ. ಬಸವರಾಜ ರಾಜಗುರು ಬಯಲು ರಂಗಮ0ದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಟ್ರಸ್ಟ್ಗಳ ಸಹಯೋಗದಲ್ಲಿ ಶನಿವಾರ ಚಿಣ್ಣರಮೇಳ ನಾಟಕೋತ್ಸವ ಜರುಗಿತು.
ಸಹೋದರತ್ವ ತಂಡ `ವೀರಗಾಸೆ', ಪ್ರಜಾಪ್ರಭುತ್ವ ತಂಡದವರು `ಹುಲಿ ಕುಣಿತ'ವನ್ನು ಪ್ರಸ್ತುತಪಡಿದರು. ನಂತರ ಸಮಾನತೆ ತಂಡ `ರಿಯಾಲಿಟಿ' ನಾಟಕ ಹಾಗೂ ಸ್ವಾತಂತ್ರ‍್ಯ ತಂಡದವರು `ಸಂವಿಧಾನ ಶರಣಂ ಗಚ್ಚಾಮಿ' ನಾಟಕ ಪ್ರದರ್ಶಿಸಿದರು. ನಂತರ ಮಕ್ಕಳು ಶಿಬಿರ ಗೀತೆ, ರಂಗಗೀತೆಗಳು, ಹಾಡುಗಳನ್ನು ಪ್ರಸ್ತುತಪಡಿಸಿದರು.
ಸಿಸ್ಲೇಪ್ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್ ನಾಟಕೋತ್ಸವಕ್ಕೆ ಚಾಲನೆ ನೀಡಿದರು. ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಶಿಬಿರ ನಿರ್ದೇಶಕ ಲಕ್ಷ÷್ಮಣ ಪೀರಗಾರ, ರಂಗಾಯಣ ಆಡಳಿತಾಽಕಾರಿ ಶಶಿಕಲಾ ಹುಡೇದ, ಇತರರಿದ್ದರು.