ಜಾಗೃತಿ ಮೂಡಿಸುವ ರೂಪಕ ಪ್ರದರ್ಶನ

drama
Published on

ಕುಶಾಲನಗರ:

ಅಂತಾರಾಷ್ಟಿçÃಯ ಮಹಿಳಾ ದಿನದ ಅಂಗವಾಗಿ ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಶನಿವಾರ ವಿದ್ಯಾರ್ಥಿಗಳಿಂದ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ರೂಪಕಗಳನ್ನು ಪ್ರದರ್ಶಿಸಲಾಯಿತು. ವಿದ್ಯಾವಂತರು ಹಾಗೂ ಉದ್ಯೋಗಸ್ಥರು ಹೆಚ್ಚಾಗಿ ತಮ್ಮ ತಮ್ಮ ಹೆತ್ತವರನ್ನು ವೃದ್ದಾಶ್ರಮಗಳಿಗೆ ದಾಖಲಿಸುತ್ತಾ ಮಾನವೀಯತೆ ಮರೆಯುತ್ತಿರುವ ಚಿತ್ರಣ, ಸಮಾಜದಲ್ಲಿ ಇಂದಿಗೂ ಮರುಳಿಸುತ್ತಲೇ ಇರುವ ಹೆಣ್ಣುಮಕ್ಕಳ ಭ್ರೂಣ ಹತ್ಯೆಗಳು ಹಾಗೂ ಪರಿಣಾಮಗಳು, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಲೇ ಇರುವ ಲೈಂಗಿಕ ದೌರ್ಜನ್ಯಗಳ ಕುರಿತು ವಿದ್ಯಾರ್ಥಿಗಳು ರೂಪಕಗಳನ್ನು ಪ್ರದರ್ಶಿಸಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್. ಶಂಭುಲಿAಗಪ್ಪ ಮಾರ್ಗದರ್ಶನದಲ್ಲಿ ಕಾಲೇಜು ಪ್ರಾಂಶುಪಾಲೆ ಟಿ.ಎ. ಲಿಖಿತಾ ಪರಿಕಲ್ಪನೆಯಲ್ಲಿ ಕಲಾರಂಭ್ ಎಂಬ ಈ ವಿನೂತನ ಕಾರ್ಯಕ್ರಮಕ್ಕೆ ಕಾಲೇಜು ಆವರಣ ಸಾಕ್ಷಿಯಾಗಿತ್ತು.

ಕಾಲೇಜಿನ ಟ್ರಿಸ್ಟಿ ಎನ್.ಎನ್. ನಂಜಪ್ಪ, ಕಾಲೇಜು ಅಧೀಕ್ಷಕ ಮಹೇಶ್ ಅಮೀನ್, ವಿವೇಕಾನಂದ ಪಿಯು ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಶ್ಮಾ, ಉಪನ್ಯಾಸಕ ಮಂಜೇಶ್, ದೀಪ್ತಿ ಇದ್ದರು. ರೂಪಕಗಳ ತೀರ್ಪುಗಾರರಾಗಿ ಪಿಯು ವಿಭಾಗದ ಉಪನ್ಯಾಸಕ ವಿಕ್ರಂ, ಮಂಜುನಾಥ್, ಮಹೇಶ್ ಅಮೀನ್, ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net