

ಹುಬ್ಬಳ್ಳಿ: 'ಉಧೋ ಉಧೋ ಯಲ್ಲವ್ವ' ಜನಪದ ಹಾಡುಗಳ ಹಬ್ಬ ಹಾಗೂ ಮಾತಾ ಏಕವ್ಯಕ್ತಿ ರಂಗಪ್ರಯೋಗ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಜು. 14ರಂದು ಸಂಜೆ 4.30ಕ್ಕೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ನಲ್ಲಿ ಏರ್ಪಡಿಸಲಾಗಿದೆ ಎಂದು ಪ್ರೇಮ್ ಜಿ ಫೌಂಡೇಷನ್ ಸಂಸ್ಥಾಪಕ ಗುರುರಾಜ ಹೂಗಾರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲೆ ಮತ್ತು ಸಂಸತಿ ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ಕಳೆದ ವರ್ಷ ಸ್ಥಾಪಿಸಲಾದ ಪ್ರೇಮ್ ಜಿ ಫೌಂಡೇಷನ್ ನಿಂದ ಈ ವರ್ಷವೂ ಆಷಾಢ ಪ್ರಯುಕ್ತ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಖ್ಯಾತ ಜನಪದ ಗಾಯಕಿ ಬೆಂಗಳೂರಿನ ಸವಿತಕ್ಕ ಅವರು "ಉಧೋ ಉಧೋ ಯಲ್ಲವ್ವ' ಶೀರ್ಷಿಕೆ ಅಡಿಯಲ್ಲಿ ದೇವಿಯ ಕುರಿತು ಜಾನಪದ ಹಾಡುಗಳನ್ನು ಪ್ರಸ್ತುತ ಪಡಿಸುವರು. ಡಾ. ಬೇಲೂರು ರಘುನಂದನ್ ಅವರ ನಿರ್ದೇಶನದ ಪದ್ಮಶ್ರೀ ಪ್ರಶಸ್ತಿ ಪುರಸತ ಡಾ. ಮಂಜಮ್ಮ ಜೋಗತಿ ಅವರ ಸಮ್ಮುಖದಲ್ಲಿ ಅವರ ಜೀವನಾಧಾರಿತ "ಮಾತಾ' ಏಕವ್ಯಕ್ತಿ ರಂಗ ಪ್ರಯೋಗ ಆಯೋಜಿಸಲಾಗಿದೆ ಎಂದರು.
ನೂಪುರ ನೃತ್ಯ ವಿಹಾರ ಅಧ್ಯಕ್ಷ, ಕಾರ್ಯಕ್ರಮ ಸಂಯೋಜಕ ಎಚ್.ಎಸ್. ಕಿರಣ ಮಾತನಾಡಿ, ಶಿರಹಟ್ಟಿಯ ಜಗದ್ಗುರು ಶ್ರೀ ಫಕೀರದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸ್ವರ್ಣ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ. ವಿ.ಎಸ್.ವಿ. ಪ್ರಸಾದ ಅವರುಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.