ನಾಟಕ ತರಬೇತಿಗೆ ಕಲಾವಿದರ ಆಹ್ವಾನ

Published on

ಚಾಮರಾಜನಗರ: ಸಾಣೆಹಳ್ಳಿ ಶ್ರೀ ಶಿವಕುಮಾರ ಕಲಾಸಂಘ ಮತ್ತು ರಂಗವಾಹಿನಿ ಸಂಸ್ಥೆಯ ಸಹಯೋಗದಲ್ಲಿ ಬೆಳ್ಳಿಹಬ್ಬದ ಅಂಗವಾಗಿ ಪರಿವರ್ತನೆಯೇ ರಂಗ ಕ್ರಾಂತಿ ರಂಗ ಶಿಬಿರದ ನಾಟಕ ತರಬೇತಿ ಹಾಗೂ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ನಾಟಕಕಾರ ಮಹಾದೇವ ಬಣಕಾರ್ ರಚನೆಯ ಉರಿಲಿಂಗಪೆದ್ದಿ ನಾಟಕವನ್ನು ಈ ಶಿಬಿರದಲ್ಲಿ ತಯಾರು ಮಾಡಲಿದ್ದು, ಹೆಸರಾಂತ ರಂಗ ನಿರ್ದೇಶಕ ಮಧುಕರ್ ಮಳವಳ್ಳಿ ರಂಗ ಶಿಬಿರದ ನಿರ್ದೇಶಕ. ಅ. 15ರಂದು ಶಿಬಿರ ಉದ್ಘಾಟನೆ ನಡೆಯಲಿದೆ. ಈ ರಂಗ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ರಂಗವಾಹಿನಿ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ (ಮೊ:9916115263) ಅವರನ್ನು ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net